ಉಜಿರೆ: ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಇತ್ತೀಚೆಗೆ ನಡೆಸಿದ 2022-23ರ ಸಾಲಿನ ಬಿ.ಎನ್.ವೈ.ಎಸ್. ಪದವಿಯ ಮೂರು ಮತ್ತು ನಾಲ್ಕನೇ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ 100% ಫಲಿತಾಂಶವನ್ನು ಪಡೆದು ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ದೇಶದ ಬೆಸ್ಟ್ ಕಾಲೇಜು ಎಂದು ಸಾಬೀತುಪಡಿಸಿದ್ದಾರೆ.
ಮೂರನೆಯ ವರ್ಷದಲ್ಲಿ 39 ಹಾಗೂ ನಾಲ್ಕನೇ ವರ್ಷದಲ್ಲಿ37 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ನಾಲ್ಕನೇ ವರ್ಷದ ವಿದ್ಯಾರ್ಥಿನಿ ಕು.ಗಣ್ಯಶ್ರೀ ಆಚಾರ್ಯ ಶೇಕಡ 87 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ, ವಿಶ್ವವಿದ್ಯಾನಿಲಯ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಕೊಡುವ ಚಿನ್ನದ ಪದಕಕ್ಕೆ ಭಾಜನರಾಗಿರುತ್ತಾರೆ ಮತ್ತು ಕು.ರಾಜೇಶ್ವರಿ ಶೇಕಡ 84.5 ಅಂಕಗಳಿಂದ ದ್ವಿತೀಯ ಸ್ಥಾನವನ್ನು ಹೊಂದಿದ್ದಾರೆ. ಮೂರನೇ ವರ್ಷದಲ್ಲಿ ಕು.ಪ್ರತೀಕ್ಷಾ ಶೇಕಡಾ 83 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಗಳಿಸಿದರೆ, ಕು.ಐಶ್ವರ್ಯ 81.2 ಶೇಕಡ ಅಂಕಗಳಿಂದ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ಗೌರವಾನ್ವಿತ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ.ಸತೀಶ್ ಚಂದ್ರ ರವರು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.