September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಸೆ.12-13: ಸೌಜನ್ಯ ಅತ್ಯಾಚಾರ ಪ್ರಕರಣ ಆರೋಪಿಗಳ ಪತ್ತೆಗೆ ಆಗ್ರಹಿಸಿ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ತನಿಖಾಧಿಕಾರಿ ಹಾಗೂ ವೈದ್ಯರನ್ನು ಕೂಡಾ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಸೆ.12 ಮತ್ತು 13ರಂದು ಮಂಗಳೂರಿನ ಕ್ಲಾಕ್ ಟವರ್ ಹತ್ತಿರವಿರುವ ತಾಲೂಕು ಕಚೇರಿಯ ಸಮೀಪ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ 5 ರ ತನಕ ಧರಣಿ ನಡೆಸಲು ದ.ಕ. ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ನಿರ್ಧರಿಸಿದೆ.

ಸೆ.12ರಂದು ಮಂಗಳೂರು, ಬೆಳ್ತಂಗಡಿ, ವಿಟ್ಲ ಹಾಗೂ ಬಂಟ್ವಾಳ ತಾಲೂಕಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದವರು ಭಾಗವಹಿಸಲಿದ್ದಾರೆ. ಸೆ.13ರಂದು ಪುತ್ತೂರು, ಕಡಬ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘ ಹಾಗೂ ಬೆಳ್ತಂಗಡಿಯ ಒಕ್ಕಲಿಗರ ಗೌಡರ ಸಂಘದವರು ಭಾಗವಹಿಸಲಿದ್ದಾರೆ

Related posts

31 ವರ್ಷಗಳ ಯಶಸ್ವಿ ಪಯಣ: ಗ್ರಾಹಕರ ವಿಶ್ವಾಸದ ಪ್ರತೀಕವಾಗಿ ಬೆಳೆದ ಸೋಜಾ ಎಲೆಕ್ಟ್ರಾನಿಕ್ಸ್: ಇಂದಿನಿಂದ ಮಾನ್ಸೂನ್ ಆಫರ್ ಪ್ರಾರಂಭ; ಶೇ.10-50ರವರೆಗೆ ವಿಶೇಷ ರಿಯಾಯಿತಿ

Suddi Udaya

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಮಚ್ಚಿನ: ಕೋರಬೆಟ್ಟುನಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ಅಭ್ಯಾಸ್ ಪಿಯು ಕಾಲೇಜು ಹಾಗೂ ಪ್ರಸನ್ನ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ರಾಣಿಯ ವರ್ಷಾಚರಣೆಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಅಸೌಖ್ಯದಿಂದ ಕೊಕ್ರಾಡಿ ಯುವಕ ಸಾವು

Suddi Udaya

ಸೌತಡ್ಕ ಕ್ಷೇತ್ರಕ್ಕೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya
error: Content is protected !!