ಲಾಯಿಲ : ಮಾನವ ರೂಪದ ದೇವರು ಶಕ್ತಿಯಾಗಿರುವ ಶ್ರೀ ಕೃಷ್ಣ ಅತ್ಯಂತ ಶ್ರೇಷ್ಠ ಮನ ಶಸ್ತ್ರಜ್ಞನಾಗಿದ್ದಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಮಕ್ಕಳ ಮೂಲಕ ಕಂಡಾಗ ಈ ವಿಚಾರಧಾರೆಗಳು ಇಂದಿಗೆ ಪ್ರಸ್ತುತವಾಗಿದೆ. ಸನಾತನ ಧರ್ಮ ನಿರಂತರವಾಗಿರುವುದರಿಂದ. ಯಾರು ಅವಾ ಹೇಳನ ಮಾಡಿದ ಮಾತ್ರಕ್ಕೆ ಧರ್ಮಗಳು ಸಾಯುವುದಿಲ್ಲ. ಧರ್ಮವನ್ನು ವಿರೋಧಿಸಲು ಯಾರಿಂದಲೂ ಸಾಧ್ಯವಿಲ್ಲ. ಸನಾತನ ಧರ್ಮ ಶಾಶ್ವತವಾಗಿರುತ್ತದೆ ಎಂದು ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ 19ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಶಶಿಕುಮಾರ್ ಅಯೋಧ್ಯ ನಗರ ವಹಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಬೆನಕ ಹೆಲ್ತ್ ಸೆಂಟರ್ ಎಂ.ಡಿ ಡಾ.ಗೋಪಾಲಕೃಷ್ಣ ಭಟ್, ಸಾಯಿ ರಾಮ್ ಗ್ರೂಪ್ ಶಶಿಧರ ಶೆಟ್ಟಿ ಗುರುವಾಯನಕೆರೆ, ಇಂಡಿಯನ್ ಅರ್ಥ್ ಮೂವರ್ಸ್ ಲಕ್ಷ್ಮಣ ಸಪಲ್ಯ ಉಜಿರೆ, ಸಮಿತಿಯ ಗೌರವಾಧ್ಯಕ್ಷರಾದ ಪ್ರಕಾಶ್ ಕಾಶಿಬೆಟ್ಟು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುದ್ದುಕೃಷ್ಣ. ಬಾಲಕೃಷ್ಣ ವೇಷ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸೇವಾ ಯೋಜನೆ ಅಂಗವಾಗಿ ಇಬ್ಬರಿಗೆ ವೈದ್ಯಕೀಯ ನೆರವು ನೀಡಲಾಯಿತು. ಸ್ಪರ್ಧೆಗಳನ್ನು ಆಯೋಜಿಸಿದ ದೈಹಿಕ ಶಿಕ್ಷಕರಾದ ಜಯರಾಜ್ ಜೈನ್ ಇವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಅರವಿಂದ ಶೆಟ್ಟಿ ನಿರೂಪಿಸಿ. ಕಾರ್ಯದರ್ಶಿ ಗಣೇಶ್ ಸ್ವಾಗತಿಸಿ, ಜಗದೀಶ್ ಕನ್ನಾಜೆ ವ0ದಿಸಿದರು. ನಂತರ ಅವು ದಾಲಾಪುಜಿ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.
ವರದಿ: ಉದಯ ಲಾಯಿಲ