September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಸರಕಾರಿ ಪ್ರೌಢಶಾಲೆಗೆ ಕ್ರೀಡಾ ಸಮವಸ್ತ್ರ ಕೊಡುಗೆ

ನಡ: ನಡಗುತ್ತು ಮನೆತನದ ಅನೀಷ್ ಜೈನ್ ಇವರು ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದ ಕ್ರೀಡಾ ಸಮವಸ್ತ್ರಗಳನ್ನು ಸೆ.11 ರಂದು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅನೀಷ್ ಜೈನ್ ರವರು ಕ್ರೀಡಾ ತರಬೇತುದಾರ ಮಹಾವೀರ ಜೈನ್ ರವರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಈ ಕೊಡುಗೆಯನ್ನು ನೀಡಿರುತ್ತಾರೆ.

ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅನೀಷ್ ಜೈನ್, ಪ್ರೌಢಶಾಲೆಗೆ ನಡಗುತ್ತು ನೀಡಿದ ಸಹಾಯವನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷ ರಾಜಶೇಖರ ಅಜ್ರಿ, ಕ್ರೀಡಾ ತರಬೇತುದಾರ ಮಹಾವೀರ ಜೈನ್, ಪತ್ರಕರ್ತರಾದ ಶಿಬಿ ಧರ್ಮಸ್ಥಳ, ಪ್ರಸಾದ್, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರುಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಅನಿಲ್ ಎ.ಜೆ, ಉಪಾಧ್ಯಕ್ಷರಾಗಿ ಜಾರ್ಜ್ ಎಮ್.ವಿ. ಆಯ್ಕೆ

Suddi Udaya

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ಗೆ ಹೈಕೋರ್ಟ್‌ ನೋಟೀಸ್ಸ್ಥಳೀಯರು ಗುರುತಿಸಿದ ಸ್ಥಳಗಳಲ್ಲಿ ಅಗೆದು ಪರಿಶೀಲಿಸುವಂತೆ ಕೋರ್ಟ್ ಗೆ ಅರ್ಜಿ

Suddi Udaya

ಪುದುವೆಟ್ಟು: ಕಾಪಿನಡ್ಕದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ನಾಶ

Suddi Udaya

ಬರೆಂಗಾಯ ಸ.ಉ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ

Suddi Udaya

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕಣಿಯೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya
error: Content is protected !!