ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.12ರಂದು ಸಂಘದ ಜ್ಯೇಷ್ಠ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಭಗೀರಥ ಜಿ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2022-23ನೇ ಸಾಲಿನಲ್ಲಿ ಸಂಘವು ರೂ.114ಕೋಟಿ ವ್ಯವಹಾರ ನಡೆಸಿ, ರೂ.54.80 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ಆನಂದ ಕೋಟ್ಯಾನ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರೈತರಿಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾ ದ ಚಂದ್ರಶೇಖರ ಮತ್ತು ತಂಡದವರು ಮಾಹಿತಿ ನೀಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಸುಜಿತಾ.ವಿ.ಬಂಗೇರ ನಿರ್ದೇಶಕರುಗಳಾದ , ನಾರಾಯಣ ರಾವ್ ಮುಗುಳಿ ವಡಿವೇಲು, ಶಾರದಾ, ಗೋಪಿನಾಥ ನಾಯಕ್, ಭುಜಂಗ ಕೆ ಶೆಟ್ಟಿ, ಚಂದ್ರರಾಜ್, ಪುರಂದರ ಶೆಟ್ಟಿ, ಹರೀಶ್ಚಂದ್ರ,ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್ ಸಂಘದ ಸದಸ್ಯರು,ನ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸಚಿನ್ ಕುಮಾರ್ ನೂಜೋಡಿ ಧನ್ಯವಾದವಿತ್ತರು.