ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾಲ್ಕೂರು: ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ನಾಲ್ಕೂರು: ಪೋಷಣಾ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ರಾಮನಗರ ಬಾಲವಿಕಾಸ ಅಂಗನವಾಡಿ ಕೇಂದ್ರದಲ್ಲಿ ಸೆ. 16 ರಂದು ಹಮ್ಮಿಕೊಳ್ಳಲಾಯಿತು.

ರಾಮನಗರ ಬಾಲವಿಕಾಸ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ಲೀಲಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗುಲಾಬಿ ಎ. ಪೋಷಣ್ ಮಾಸಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರೂ ಪೌಷ್ಟಿಕ ಆಹಾರ ಪದ್ಧತಿಯನ್ನು ಪಾಲಿಸುವುದರಿಂದ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಸರಿಯಾಗಿ ಆಗುತ್ತದೆ ಎಂದರು.

ಆರೋಗ್ಯ ಕಾರ್ಯಕರ್ತೆ ಮಮತಾ ಗರ್ಭಿಣಿ, ಬಾಣಂತಿಯರು ಸೇವಿಸಬೇಕಾದ ಆಹಾರ ಪದ್ಧತಿ, ಆರೈಕೆ ಕ್ರಮಗಳ ಬಗ್ಗೆ ತಿಳಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಚೈತ್ರಾ, ಗ್ರಾಮಸ್ಥರಾದ ವಾಸು ಪೂಜಾರಿ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ತಾಯಂದಿರು, ಆಶಾ ಕಾರ್ಯಕರ್ತೆಯರು, ಗ್ರಾಮ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದರು.

ಪುಟಾಣಿ ಮಕ್ಕಳ ಪ್ರಾರ್ಥನೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ಗೀತಾ ಸ್ವಾಗತಿಸಿದರು. ಪುಷ್ಪಲತಾ ವಂದಿಸಿದರು. ವಸುಂಧರಾ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಸಹಾಯಕಿ ನಳಿನಿ ಸಹಕರಿಸಿದರು.

Related posts

ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್ ರವರಿಗೆ “ಡಾ.ಯಂ ವಿಶ್ವೇಶ್ವರಯ್ಯ ತಾಂತ್ರಿಕ ಪ್ರಶಸ್ತಿ”

Suddi Udaya

ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ರಾಮ ನಗರ ಮೈರಲ್ಕೆ ಓಡಿಲ್ನಾಳ ವರ್ಷಾವಧಿ ಜಾತ್ರೋತ್ಸವ

Suddi Udaya

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

Suddi Udaya

ಸಹಕಾರಿ ಸಪ್ತಾಹದಲ್ಲಿ ಪಿಲಿಗೂಡು ಹಾ.ಉ.ಮ.ಸ. ಸಂಘಕ್ಕೆ ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ

Suddi Udaya

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು: ಮೈರೋಳ್ತಡ್ಕ ಸ.ಉ. ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya
error: Content is protected !!