ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 344 ಕೋಟಿ ವಾರ್ಷಿಕ ವ್ಯವಹಾರ: 1 ಕೋಟಿ 9 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 12.50 ಡಿವಿಡೆಂಟ್ ಘೋಷಣೆ:

Suddi Udaya

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಭಟ್ ಕಟ್ಟೂರು ಅವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಸ್ವರಾಜ್ ಟವರ್ಸ್ ನ ಶ್ರೀಗುರು ಸಭಾಭವನದಲ್ಲಿ ಸೆ.16 ರಂದು ನಡೆಯಿತು.

ವರದಿ ಸಾಲಿನಲ್ಲಿ ಸಂಘ ತಮ್ಮ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ,ಅಡುಗೆ ಅನಿಲ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡಿದೆ. ರೂ 1,00,19003.12 ಖರೀದಿಸಿ ರೂ ,89,72,998.89ರಷ್ಟು ಸೊತ್ತುಗಳನ್ನು ಮಾರಾಟ ಮಾಡಿದೆ.
ಇದರಿಂದ 14,83,501.13 ರಷ್ಟು ವ್ಯಾಪಾರ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಿವಭಟ್ ಕಟ್ಟೂರು ತಿಳಿಸಿದರು.

ಈ ಸಾಲಿನಲ್ಲಿ ಒಟ್ಡು ರೂ 3,44,88,44,298.25 ರಷ್ಟು ವಾರ್ಷಿಕ ವ್ಯವಹಾರ ನಡೆಸಿರುತ್ತದೆ.ಈ ಸಾಲಿನಲ್ಲಿ ರೂ.38,05,36,835.45 ಹೆಚ್ಚುವರಿ ವ್ಯವಹಾರ ಆಗಿರುತ್ತದೆ. ಈ ಸಾಲಿನಲ್ಲಿ ಒಟ್ಟು ರೂ.
1,09,42,351.30 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 12.50 ಶೇ ಡಿವಿಡೆಂಟ್ ಘೋಷಣೆ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೀರಾ,ನಿರ್ದೇಶಕರಾದ ಉಂಗೀಲಬೈಲು,ಹೆಚ್‌.ಧರ್ಣಪ್ಪ ಪೂಜಾರಿ, ಗುರುಪ್ರಸಾದ್,ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಶಶಿಧರ ಶೆಟ್ಟಿ ಎ, ಧರ್ಣಪ್ಪ,ಕೆಂಪ, ಶ್ರೀಮತಿ ಗುಲಾಬಿ ಎಂ.ಎನ್, ಶ್ರೀಮತಿ ಸುಂದರಿ, ಜಿನ್ನಪ್ಪ ಪೂಜಾರಿ, ವಲಯ ಮೇಲ್ವಿಚಾರಕ ಸಂದೇಶ್ ಉಪಸ್ಥಿತರಿದ್ದರು.

ಮಹಾಸಭೆಗೆ ಹೆಚ್ಚಿನ ಸದಸ್ಯರು ಭಾಗವಹಿಸಿದರು. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಆರೋಗ್ಯಕರ ಚರ್ಚೆಗಳು ನಡೆಯಿತು. ಸಂಘದ ಮಾಜಿ ಅಧ್ಯಕ್ಷರುಗಳು,ಸದಸ್ಯರುಗಳು ಉಪಸ್ಥಿತರಿದ್ದರು.

Leave a Comment

error: Content is protected !!