ಶಿಬರಾಜೆ: ಇಲ್ಲಿನ ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವು ಸೆ.15ರಂದು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಪೌಷ್ಠಿಕತೆ ಬಗ್ಗೆ, ಪೌಷ್ಠಿಕ ಆಹಾರಗಳ ವಿಧಗಳ ಬಗ್ಗೆ ಮತ್ತು ಅವುಗಳ ಸೇವನೆಯಲ್ಲಿ ಮಕ್ಕಳ ಮನ ಒಲಿಸುವ ಪೋಷಕರ ಪಾತ್ರದ ಬಗ್ಗೆ ಸಿಹೆಚ್‌ಒ ನಿಖಿತಾ, ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾ, ಕಳೆಂಜ ಗ್ರಾ.ಪಂ ಸದಸ್ಯರು ಹಾಗೂ ಶಾಲಾ ಬಾಲವಿಕಾಸ ಸಮಿತಿಯ ಸದಸ್ಯರಾದ ಜೆ.ಎಸ್ ನಿತ್ಯಾನಂದ ರೈ, ಆಶಾ ಕಾರ್ಯಕರ್ತೆ ಪುಷ್ಪಾ ಮಾಹಿತಿಯನ್ನು ತಿಳಿಸಿಕೊಟ್ಟರು. ಮಕ್ಕಳ ಪೋಷಕರು ಮನೆಯಲ್ಲೇ ತಯಾರಿಸಿ ತಂದಂತಹ ಪೌಷ್ಠಿಕ ಆಹಾರವನ್ನು ಎಲ್ಲರೂ ಸವಿದರು.

ಆಶಾ ಕಾರ್ಯಕರ್ತೆ ಶ್ರೀಮತಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಾಯಕಿ ಅನ್ಸಿಲ್ಲಾ ರೋಶ್ನಿ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಹಕರಿಸಿದರು.