ಕೊಕ್ಕಡ: ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ಕಾಮಗಾರಿ ಮಜ್ದೂರ್ ಸಂಘ ಕೊಕ್ಕಡ ವಲಯದ ವತಿಯಿಂದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ (ವಿಶ್ವ ಕರ್ಮ ಜಯಂತಿ ) ಅಸಂಘಟಿತ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ದಾನಿಗಳಿಗೆ ಗೌರವಾರ್ಷಣೆ ಕಾರ್ಯಕ್ರಮವು ಅಂಬೇಡ್ಕರ್ ಭವನದಲ್ಲಿ ಸೆ.17 ರಂದು ಜರುಗಿತು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿ ಮಾತನಾಡಿ ಯಾವುದೇ ಮನೆ ಅಥವಾ ಕಟ್ಟಡ ಕಟ್ಟಿ ಶುಭಾರಂಭದ ಸಂದರ್ಭ ಮೊದಲ ಗೌರವವನ್ನು ಕಾರ್ಮಿಕರಿಗೆ ನೀಡುತ್ತೇವೆ ಭಾರತ ಸರ್ಕಾರವು ಕಾರ್ಮಿಕರಿಗಾಗಿ ಒಳ್ಳೊಳ್ಳೆ ಯೋಜನೆಗಳನ್ನು ಹಾಕಿಕೊಂಡಿದೆ ಕೊಕ್ಕಡ ಮಜ್ದೂರ್ ಸಂಘವು ಕಾರ್ಮಿಕರಿಗೆ ಮಾಹಿತಿಗಳನ್ನು ನೀಡಿ ವಿವಿಧ ಅನುದಾನಗಳನ್ನು ತೆಗೆಸಿಕೊಟ್ಟಿದೆ. ಇದರಿಂದ ಬಡವರು ಕೂಡಾ ಉತ್ತಮವಾದ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕೊಕ್ಕಡ ವಲಯ ಭಾರತೀಯ ಮಜ್ದೂರ್ ಸಂಘದ ಸಂಯೋಜಕ ಚಂದ್ರಶೇಖರ ಗಾಣಗಿರಿ ವಹಿಸಿದರು.
ವೇದಿಕೆಯಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್, ಹಿರಿಯ ಕಾರ್ಮಿಕ ನಾಯಕ ಹಾಗೂ ಭಾರತೀಯ ಮಜ್ದೂರ್ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾ.ಪಂ. ನ ನಿಕಟ ಪೂರ್ವಾಧ್ಯಕ್ಷ ಯೋಗೀಶ್ ಆಲಂಬಿಲ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬೇಬಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾನಿಗಳಾದ ಕೃಷ್ಣ ಭಟ್, ಬಾಲಕೃಷ್ಣ ನೈಮಿಷ, ಕುಶಾಲಪ್ಪ ಗೌಡ ಪೂವಾಜೆ , ಗಣೇಶ್ ಕುಲಾಯಿ ಕೊಕ್ಕಡ, ಮಂಜುನಾಥ ವಕೀಲರು, ಸಂತೋಷ್ ಪಾಲೆತ್ತಡಿ ಕಳೆಂಜ, ಕುಶಲ ಕರ್ಮಿಗಳಾದ ಕಿಟ್ಟ ಮೇಸ್ತ್ರೀ ಕಡೀರ, ಶ್ರೀನಿವಾಸ ಆಚಾರ್ಯ ಕಾಪಿನಬಾಗಿಲು, ಮಜ್ದೂರ್ ಸಂಘದ ಮೊದಲಿಂದಲೂ ದುಡಿದ ಶ್ರೀಮತಿ ವನಜಾಕ್ಷಿ ಕೊಕ್ಕಡ, ವಿವಿಧ ವಸ್ತುಗಳನ್ನು ನೀಡಿದ ಯೋಗಿಶ್ ಆಲಂಬಿಲ, ಖಾಲಿದ್ ಕೊಕ್ಕಡ, ಯೋಗೀಶ್ ನಿಡ್ಲೆ, ಶಶಿಚಂದ್ರ ಅರಸಿನಮಕ್ಕಿ, ರಾಜೇಶ್ ಎಂ.ಕೆ, ಕಾರ್ಯತಡ್ಕ, ಸರೋಜ, ಗಿರೀಶ್, ಮಹಾವೀರ ಕಾಲೋನಿ ಕೊಕ್ಕಡ, ಬಿ.ಎಂಎಸ್ ರಿಕ್ಷಾ ಚಾಲಕ ಸಂಘ ಕೊಕ್ಕಡ, ಬಿಎಂಎಸ್ ರಿಕ್ಷಾ ಚಾಲಕರ ಸಂಘ ಕಳೆಂಜ ರವರನ್ನು ಗೌರವಿಸಲಾಯಿತು.
ಕೊಕ್ಕಡ ವಲಯ ಭಾರತೀಯ ಮಜ್ದೂರ್ ಸಂಘದ ಸಂಯೋಜಕ ಚಂದ್ರಶೇಖರ ಗಾಣಗಿರಿ ಸ್ವಾಗತಿಸಿದರು.
ಬೆಳ್ತಂಗಡಿ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ಧನ್ಯವಾದವಿತ್ತರು. ಭಾರತೀಯ ಮಜ್ದೂರ್ ಸಂಘ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ಕೊಲ್ಲಾಜೆಪಲ್ಕೆ ಕಾರ್ಯಕ್ರಮ ನಿರೂಪಿಸಿದರು.