ಪಟ್ರಮೆ: ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.16ರಂದು ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಮರ್ಪಣಾ ಸಭಾಭವನದಲ್ಲಿ ಜರುಗಿತು.
ಸಂಘದ ವಾರ್ಷಿಕ ವರದಿಯನ್ನು ಸಂಘದ ಕಾರ್ಯನಿರ್ವಹಣಾಧಿಕಾರಿ ಪುರಂದರ ಸೂರ್ಯತ್ತಾವು ವಾಚಿಸಿದರು. ಒಕ್ಕೂಟದ ಪಶುವೈದ್ಯರಾದ ಡಾ| ಜಿತೆಂದ್ರಪ್ರಸಾದ್ ಮಾತನಾಡಿ ಪಶುಗಳಲ್ಲಿ ಬರುವ ಕಾಯಿಲೆ, ಅಗತ್ಯ ಲಸಿಕೆಗಳನ್ನು ರೈತರು ಹಾಕಿಸುವ ಬಗ್ಗೆ, ಪಶು ವಿಮ ಗರ್ಭಧಾರಣಾ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಾಜೇಶ್.ಪಿ ಕಾಮತ್ ಮಾತನಾಡಿ ಒಕ್ಕೂಟದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಹಾಲು ಉತ್ಪಾದಕರ ರೈತರಿಂದಲೇ ಹೈನುಗಾರಿಕೆಯ ಸಮಸ್ಯೆಗಳನ್ನು ವಿವರ ಪಡೆದರು. ಜಿಲ್ಲೆಯಿಂದ ಹೊರಜಿಲ್ಲೆಗಳ ರಾಸುಗಳು ಕಡಿಮೆದರಕ್ಕೆ ರೈತರು ಮಾರಾಟ ಮಾಡುತ್ತಿದ್ದು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ದೇವಪಾಲ ಅಜ್ರಿ ಉಳಿಯಬೀಡು ಸಭೆಯನ್ನುದ್ದೇಶಿಸಿ ಮಾತನಾಡಿ ಸಂಘಕ್ಕೆ ವೇತನ ಕಟ್ಟಡದ ಶಿಲಾನ್ಯಾಸ ಮಾಡಿದ್ದು ಕಾಮಗಾರಿಯನ್ನು ಬೆನಕ ಕನ್‌ಸ್ಟ್ರಕ್ಷನ್‌ರವರು ನಿರ್ವಹಿಸಲಿದ್ದು ಸಂಘದಲ್ಲಿ ಕಟ್ಟಡ ನಿಧಿ ಕಡಿಮೆ ಇದ್ದು ಸರಕಾರದ ಅನುದಾನಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದು, ಸದಸ್ಯರು ಹಾಗೂ ಊರವರು ಹೆಚ್ಚಿನ ಧನಸಹಾಯವನ್ನು ನೀಡಬೇಕೆಂದು ಕೇಳಿಕೊಂಡರು.
ಸಂಘವು 63 ಸಾವಿರ ಲಾಭವಿದ್ದು ಉತ್ಪಾದಕರ ಬೋನಸ್ಸನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ತೀರ್ಮಾಣಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ನೀಲಯ್ಯ ಗೌಡ ಹಿರ್ತಡ್ಕ, ಶ್ರೀ ರುಕ್ಮಯ್ಯ ಗೌಡ ಪದಳ, ನಿರಂಜನ್ ಜೈನ್, ಕೆಂಚಪ್ಪ ಗೌಡ ಹೊಳೆಬದಿ, ಉದಯ್‌ಕುಮಾರ್ ಅನಾರು, ಬಾಲಕೃಷ್ಣ ಗೌಡ ಕಲ್ಲಾಜೆ, ಚೆನ್ನಪ್ಪ ಗೌಡ ದೊಡ್ಡಮನೆ, ರವಿ ಪದಳ, ಕುಸುಮಾವತಿ ಅನಾರು, ದೇವಕಿ ಪಾದೆಜಾಲು, ಉಪಸ್ಥಿತರಿದ್ದರು.
ಶ್ರೀಮತಿ ವೇದಾವತಿ ಪ್ರಾರ್ಥಿಸಿ, ದೀಕ್ಷಿತಾ ಎ. ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ರುಕ್ಮಯ ಗೌಡ ಪದಳ ಸ್ವಾಗತಿಸಿ, ನಿರ್ದೇಶಕಿ ಕುಸುಮಾವತಿ ಧನ್ಯವಾದವಿತ್ತರು.