25.5 C
ಪುತ್ತೂರು, ಬೆಳ್ತಂಗಡಿ
March 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

ಅರಸಿನಮಕ್ಕಿ: ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಸಿನಮಕ್ಕಿ ಗ್ರಾ.ಪಂ. ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿದರು.

ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಪೇಟೆಯಿಂದ ಕೊಕ್ಕಡದ ಕಾಪಿನಬಾಗಿಲಿನ ವರೆಗೆ ಡಾಮರು ರಸ್ತೆಯ ಎರಡೂ ಬದಿಯಿಂದ ಮರಗಳು ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಭಾರಿ ಅನಾನುಕೂಲವಾಗಿರುತ್ತದೆ ಹಾಗೂ ರಸ್ತೆ ಬದಿ ಮರಗಿಡಗಳು ಬೆಳೆದು ರಸ್ತೆ ಕಾಣದ ಹಾಗೆ ಇರುವುದರಿಂದ ಅಪಘಾತಗಳು ಆಗುವ ಸಂಭಾವ ಇದೆ ಎಂದು ಕೂಡಲೇ ತೆರವುಗೊಳಿಸುವಂತೆ ಅರಸಿನಮಕ್ಕಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅರಸಿನಮಕ್ಕಿಯವರಾದ ಅವಿನಾಶ್ ಬಿಢೆ, ಬಿ ಅಚ್ಚುತ, ಬಿ ಅಬ್ಬಾಸ್, ರವಿ ಶೆಟ್ಟಿ, ಕಾಶಿನಾಥ್, ಪಿ ರವಿ, ಪರಮೇಶ್ವರ, ರಾಕೇಶ್ ಶೆಟ್ಟಿ, ಗುರುಪ್ರಸಾದ್, ಕೆ.ಕೆ ರಾಜ, ಶ್ರೀಕರ ಬಿಢೆ, ಸ್ತುತಿ ಬಿಢೆ, ಭವ್ಯ, ಕೃಷ್ಣಪ್ಪ ಗೌಡ, ವಿಜಯ್ ಕುಮಾರ್, ಸುಂದರ ಶೆಟ್ಟಿಗಾರ್ ಹಾಗೂ ಇನ್ನೀತರರು ಮನವಿಯನ್ನು ನೀಡಿದ್ದಾರೆ.

Related posts

ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರಿಂದ ಗದ್ದೆ ನಾಟಿ ಕಾರ್ಯಕ್ರಮ

Suddi Udaya

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಜೂ.16: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ ನಿಗದಿ

Suddi Udaya

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆ ಮತ್ತು ಶಿಕ್ಷಣ ಕಾರ್ಯಾಗಾರ

Suddi Udaya

ಮಡಂತ್ಯಾರು ಸಹಕಾರಿ ಸಂಘದ ಚುನಾವಣೆ: ಹೈಕೋರ್ಟು ತೀರ್ಪು ಪ್ರಕಟ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ನಿರ್ದೇಶಕ ಸ್ಥಾನ 7 ರಿಂದ 9 ಕ್ಕೆ ಏರಿಕೆ

Suddi Udaya
error: Content is protected !!