September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

ಅರಸಿನಮಕ್ಕಿ: ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಸಿನಮಕ್ಕಿ ಗ್ರಾ.ಪಂ. ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿದರು.

ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಪೇಟೆಯಿಂದ ಕೊಕ್ಕಡದ ಕಾಪಿನಬಾಗಿಲಿನ ವರೆಗೆ ಡಾಮರು ರಸ್ತೆಯ ಎರಡೂ ಬದಿಯಿಂದ ಮರಗಳು ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಭಾರಿ ಅನಾನುಕೂಲವಾಗಿರುತ್ತದೆ ಹಾಗೂ ರಸ್ತೆ ಬದಿ ಮರಗಿಡಗಳು ಬೆಳೆದು ರಸ್ತೆ ಕಾಣದ ಹಾಗೆ ಇರುವುದರಿಂದ ಅಪಘಾತಗಳು ಆಗುವ ಸಂಭಾವ ಇದೆ ಎಂದು ಕೂಡಲೇ ತೆರವುಗೊಳಿಸುವಂತೆ ಅರಸಿನಮಕ್ಕಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅರಸಿನಮಕ್ಕಿಯವರಾದ ಅವಿನಾಶ್ ಬಿಢೆ, ಬಿ ಅಚ್ಚುತ, ಬಿ ಅಬ್ಬಾಸ್, ರವಿ ಶೆಟ್ಟಿ, ಕಾಶಿನಾಥ್, ಪಿ ರವಿ, ಪರಮೇಶ್ವರ, ರಾಕೇಶ್ ಶೆಟ್ಟಿ, ಗುರುಪ್ರಸಾದ್, ಕೆ.ಕೆ ರಾಜ, ಶ್ರೀಕರ ಬಿಢೆ, ಸ್ತುತಿ ಬಿಢೆ, ಭವ್ಯ, ಕೃಷ್ಣಪ್ಪ ಗೌಡ, ವಿಜಯ್ ಕುಮಾರ್, ಸುಂದರ ಶೆಟ್ಟಿಗಾರ್ ಹಾಗೂ ಇನ್ನೀತರರು ಮನವಿಯನ್ನು ನೀಡಿದ್ದಾರೆ.

Related posts

ಪುಂಜಾಲಕಟ್ಟೆ ಕಬಡ್ಡಿ ಪಂದ್ಯಾಟ: ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯ ಬಾಲಕರ ತಂಡಕ್ಕೆ ಪ್ರಶಸ್ತಿ

Suddi Udaya

ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ: ಧರ್ಮಸ್ಥಳದ ಎಂ. ಜಯರಾಮ ಭಂಡಾರಿ ರವರಿಂದ ನಾಮಪತ್ರ ಸಲ್ಲಿಕೆ

Suddi Udaya

ಹೊಟ್ಟೆನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ್ಯು

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ : ಸ್ಟಾರ್ ಲೈನ್ ಶಾಲಾ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಶಿಫಾರಸ್ಸು ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರಿಗೆ ಸಮಿತಿಯಿಂದ ಗೌರವಾರ್ಪಣೆ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ : ಹೊರ ಕಾಣಿಕೆಯ ಆಕಷ೯ಕ ಹಾಗೂ ಭವ್ಯ ವಾದ ಶೋಭಾಯಾತ್ರೆ – ಯಕ್ಷಗಾನ ವೇಷ, ಹತ್ತು ಭಜನಾ ತಂಡಗಳಿಂದ ಕುಣಿತ ಭಜನೆ, ಕೊಂಬು,ಚೆಂಡೆ, ವಾದ್ಯ ವಿಶೇಷ ಆಕಷ೯ಣೆ

Suddi Udaya
error: Content is protected !!