ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ಸಮಾಜ ಸೇವಕ ಕೇಶವ ಫಡಕೆಯವರಿಗೆ ಗೌರವಾರ್ಪಣೆ

Suddi Udaya

ಮಲಂವತಿಗೆ: ಕಳೆದ ಸುಮಾರು 40 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ, ಊರಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ ಸಮಾಜ ಸೇವಕ ಮಲಂತಿಗೆ ಗ್ರಾಮದ ಸುಭಾಶ್‌ಬಾಗ್ ನಿವಾಸಿ ಕೇಶವ ಫಡಕೆ ಮತ್ತು ಶ್ರೀಮತಿ ಉಷಾ ಅವರನ್ನು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ಸೆ.19 ರಂದು ನಡೆದ ಗಣೇಶೋತ್ಸವದಲ್ಲಿ ಗೌರವಿಸಲಾಯಿತು.


1980-1990 ರ ದಶಕದಲ್ಲಿ ಮಲವಂತಿಗೆ (ದಿಡುಪೆ) ಗ್ರಾಮವು ಮಾಧ್ಯಮಗಳಿಂದ ಕುಗ್ರಾಮ ಎಂದು ಗುರುತಿಸಲ್ಪಟ್ಟ ಅತೀ ಹಿಂದುಳಿದ ಪ್ರದೇಶವಾಗಿತ್ತು ಮತ್ತು ಕುಗ್ರಾಮ” ಎಂಬ ಪದಕ್ಕೆ ಅನ್ವರ್ಥವೇ ಆಗಿತ್ತು ಅಭಿವೃದ್ಧಿ ಎಂಬುವುದು ಮರೀಚಿಕೆ ಆಗಿದ್ದ ಸಮಯದಿಂದ ಗ್ರಾಮದ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳನ್ನು ತನ್ನದೇ ಆದ ದಾರಿಯಲ್ಲಿ ಪ್ರಯತ್ನಗಳನ್ನು ನಡೆಸಿ ತೆರೆಯಮರೆಯಲ್ಲಿ ಹಲವು ಜನೋಪಯೋಗಿ ಕಾರ್ಯಗಳನ್ನು ಊರಿಗೆ ತಂದವರಲ್ಲಿ ಕೇಶವ ಫಡಕೆಯವರು ಒಬ್ಬರಾಗಿದ್ದಾರೆ. ಧಾರ್ಮಿಕ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವ, ಭಜನಾ ಸಂಘ, ಸಾಹಿತ್ಯ ಸಮ್ಮೇಳನ, ಸಹಕಾರಿ ಸಂಸ್ಥೆಗಳು, ಶಿಕ್ಷಣ ರಂಗದಲ್ಲಿ ಸಕ್ರೀಯ ಸದಸ್ಯರಾಗಿ, ಪ್ರಾಮಾಣಿಕ, ನಿಸ್ವಾರ್ಥ ಮನೋಭಾವದಿಂದ ಇವರು ಸೇವೆಯನ್ನು ಮಾಡಿದ್ದಾರೆ. ಸಮಾಜ ಸೇವಕರೆಂದು ಗುರುತಿಸಿಕೊಂಡಿರುವ ಕೇಶವ ಫಡಕೆಯವರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಲ್ಲಿ ಕಳೆದ 37 ವರ್ಷಗಳಿಂದ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದಲ್ಲಿಯೂ ಪಾತ್ರವಹಿಸಿದ್ದಾರೆ.

Leave a Comment

error: Content is protected !!