April 2, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ನೀರಚಿಲುಮೆಯಲ್ಲಿ ಚರಂಡಿಗೆ ಉರುಳಿದ ಕಾರು: ನ್ಯಾಯವಾದಿ ಬಿ.ಎಂ ಭಟ್ ಅಪಾಯದಿಂದ ಪಾರು

ಧರ್ಮಸ್ಥಳ: ಇಲ್ಲಿಯ ನೀರಚಿಲುಮೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಅಪಘಾತವಾಗಿದ್ದು, ಚಾಲಕ ಅಪಾಯದಿಂದ ಪಾರಾದ ಘಟನೆ ಇಂದು ಸೆ.22 ರಂದು ಬೆಳಗ್ಗೆ ನಡೆದಿದೆ.

ಕಾರ್ಮಿಕ ಮುಖಂಡ ಹಾಗೂ ನ್ಯಾಯವಾದಿಯಾಗಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಪಿಐಎಂ ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಬಿ.ಎಂ ಭಟ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ.

ಇಂದು ಬೆಳಿಗ್ಗೆ ಬೆಳ್ತಂಗಡಿಯ ತಮ್ಮ ಕಚೇರಿಗೆ ಬರುತ್ತಿರುವ ಸಮಯ ನೀರಚಿಲುಮೆ ಬಳಿ ಕಾರು ಅವರ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಗೆ ಚಲಿಸಿದ್ದು, ಕೂಡಲೇ ಅವರು ಕಾರನ್ನು ಬಲಬದಿಗೆ ತಿರುಗಿಸಿದಾಗ ಕಾರು ಬಲಬದಿಯ ರಸ್ತೆ ಚರಂಡಿಗೆ ಬಿದ್ದಿತ್ತೆನ್ನಲಾಗಿದೆ. ಕಾರಿನ ಎದುರು ಭಾಗ ಜಖಂಗೊಂಡಿದ್ದು, ಬಿ.ಎಂ ಭಟ್ ಅವರು ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ವೇಳೆ ಈ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕವಿದ್ದು, ಇವರ ಕಾರು ಅಪಘಾತವಾಗುವ ವೇಳೆ ಎದುರಿನಿಂದ ಯಾವುದೇ ವಾಹನ ಬಾರದಿರುವುದರಿಂದ ಸಂಭವೀನಿಯ ಅಪಘಾತ ತಪ್ಪಿದೆ.

Related posts

ಪೆರಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಪ್ರಭಾ ಬಿ ಅವರಿಗೆ ನಿವೃತ್ತಿ

Suddi Udaya

ಲಾಯಿಲ ಬಿಜೆಪಿ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಬ್ಯೂಟಿಪಾರ್ಲರ್ ಎಸೋಸಿಯೇಶನ್ ವತಿಯಿಂದ ಮಹಿಳಾ ದಿನಾಚರಣೆ

Suddi Udaya

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

Suddi Udaya

ಶಿಬರಾಜೆ ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿಯಲ್ಲಿ ಅಗ್ನಿ ಅನಾಹುತಗಳ ತಡೆಗಟ್ಟುವ ಕುರಿತು ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya
error: Content is protected !!