37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಕಾರ್ಯಗಳಿಗೆ ರಾಜ್ಯಾದ್ಯಂತ ಮೆಚ್ಚುಗೆ: ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಭಾವಚಿತ್ರ ಪೇಂಟಿಂಗ್ ನಲ್ಲಿ ತಯಾರಿಸಿ ಬಳ್ಳಾರಿಯ ಅಭಿಮಾನಿಯಿಂದ ಹಸ್ತಾಂತರ

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಮಾಜಮುಖಿ ಚಿಂತನೆ ಹಾಗೂ ಕಾರ್ಯವೈಖರಿಗೆ ರಾಜ್ಯವ್ಯಾಪ್ತಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಬಳ್ಳಾರಿಯ ಅಭಿಮಾನಿಯಿಂದ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಬೃಹತ್ ಗಾತ್ರದ ಭಾವಚಿತ್ರ ತಯಾರಿಸಿ ಹಸ್ತಾಂತರಿಸಿದರು.

ತಾಲೂಕಿಗೆ ಅಪ್ಪಲಿಸಿದ ನೆರೆ ಪ್ರವಾಹದಲ್ಲಿ ಮಾಡಿದ ಕೆಲಸಗಳು, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಆಸರೆಯಾದ ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಕಾರ್ಯಗಳನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ, ಮೆಚ್ಚಿ ತಂಡದ ಸಂಚಾಲಕ, ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಇದರ ಮಾಲಕ ಮೋಹನ್ ಕುಮಾರ್ ಅವರ ಭಾವಚಿತ್ರ ತಯಾರಿಸಿ ಬಳ್ಳಾರಿಯ ಅಭಿಯಾನಿ ಗುರುರಾಜ್ ಎಂಬವರು ಬಳ್ಳಾರಿಯಿಂದ ಉಜಿರೆಗೆ ಬಸ್ ಮುಖಾಂತರ ಆಗಮಿಸಿ ಮೋಹನ್ ಕುಮಾರ್ ಅವರನ್ನು ಭೇಟಿ ಮಾಡಿ ಎರಡು ಬೃಹತ್ ಗಾತ್ರದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.

ಈ ಸಂದರ್ಭ ಮೋಹನ್ ಕುಮಾರ್ ಅವರು ಬಳ್ಳಾರಿಯ ಅಭಿಮಾನಿಗೆ ಧನ್ಯವಾದ ಅರ್ಪಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

Related posts

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲ್ಮಂಜ ಸ. ಪ್ರೌ. ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಹಂಸ ಮೊಯ್ಲಿ ರವರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿಯವರಿಂದ ಸಂತಾಪ

Suddi Udaya

ಭೂಸೇನೆಯಲ್ಲಿ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಮಾ.31 ರಂದು ಸೇವಾ ನಿವೃತ್ತಿ

Suddi Udaya

ಸೆ.3ರಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ನ್ಯಾಯಾಲದ ಆದೇಶ ಉಲ್ಲಂಘಿಸದಂತೆ – ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು- ಸಮಾನ ಮನಸ್ಕರಿಂದ ತಹಸೀಲ್ದಾರರಿಗೆ ಮನವಿ

Suddi Udaya

ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕುಂಟಿನಿ ಸ.ಕಿ.ಪ್ರಾ. ಶಾಲೆಯ ಎಸ್.ಡಿ.ಎಮ್.ಸಿ. ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಪವಿತ್ರ, ಉಪಾಧ್ಯಕ್ಷರಾಗಿ ಇಲ್ಯಾಸ್ ಆಯ್ಕೆ

Suddi Udaya
error: Content is protected !!