ಬೆಳ್ತಂಗಡಿ : ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾ ಸಭೆಯು ಎಸ್. ಜಯರಾಮ ಶೆಟ್ಟಿ ಪಡಂಗಡಿ ಇವರ ಅಧ್ಯಕ್ಷತೆಯಲ್ಲಿ ಬಂಟರ ಭವನದಲ್ಲಿ ಸೆ 23 ರಂದು ನಡೆಯಿತು.
ಸೊಸೈಟಿಯು ವರದಿ ಸಾಲಿನಲ್ಲಿ ರೂ.571ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.1ಕೋಟಿ 53 ಲಕ್ಷ 91ಸಾವಿರ ನಿವ್ವಳ ಲಾಭ ಗಳಿಸಿದೆ, ಸದಸ್ಯರಿಗೆ ಶೇ.18% ಡಿವಿಡೆಂಟ್ ನ್ನು ಸಂಘದ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ ಘೋಷಿಸಿದರು.
ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಮಂಡಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಜಿ. ಶೆಟ್ಟಿ ಉಜಿರೆ, ನಿರ್ದೇಶಕರಾದ ಬಿ.ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ, ಜಯಂತ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ನಾರಾಯಣ ಶೆಟ್ಟಿ, ಕೃಷ್ಣ ರೈ. ಟಿ., ರಘುರಾಮ ಶೆಟ್ಟಿ, ಕೆ. ಸದಾಶಿವ ಶೆಟ್ಟಿ, ಅಂಬಾ ಬಿ. ಆಳ್ವ, ರಾಜೇಶ್ ಶೆಟ್ಟಿ, ಪುರಂದರ ಶೆಟ್ಟಿ, ಜಯರಾಮ ಭಂಡಾರಿ ಎಂ., ಮಂಜುನಾಥ ರೈ, ಸಾರಿಕಾ ಶೆಟ್ಟಿ ಉಪಸ್ಥಿತರಿದ್ದರು.
ನಿರ್ದೇಶಕ ರಘುರಾಮ ಶೆಟ್ಟಿ ಸ್ವಾಗತಿಸಿ,ರಂಜಿತ್ ಪ್ರಾರ್ಥಿಸಿ, ನಿರ್ದೇಶಕ ಬಿ. ಸೀತಾರಾಮ ಶೆಟ್ಟಿ ವಂದಿಸಿದರು.
ಸಭೆಯಲ್ಲಿ ಆಡಳಿತ ಕಚೇರಿ ಮತ್ತು ಶಾಖಾ ವ್ಯವಸ್ಥಾಪಕರಾದ ಸುಜಯ್ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಶಾಖಾ ವ್ಯವಸ್ಥಾಪಕರಾದ ಸಂತೋಷ್ ಕುಮಾರ್, ಅಜಿತ್ ಕುಮಾರ್, ವಿನಯ್ ಕುಮಾರ್, ಸಚಿನ್ ಶೆಟ್ಟಿ, ವಿಲಾಸ್ ಶೆಟ್ಟಿ ಪಿ. ವಿ., ತಿಲಕ್ ರಾಜ್ ರೈ, ಅಜಿತ್ ಶೆಟ್ಟಿ, ನವೀನ್ ರೈ ಬಿ, ಕೆ. ನಾರಾಯಣ ಶೆಟ್ಟಿ, ಪ್ರಕ್ಷಿತ್ ಶೆಟ್ಟಿ ಬಿ, ಶ್ರೀಮತಿ ಅಕ್ಷತಾ, ಅಶ್ವಥ್ ನೂಜಿಬೈಲು, ಅಶೋಕ, ಪ್ರವೀಣ್ ಕುಮಾರ್ ಬಿ, ಅಕ್ಷಿತ್ ಡಿ. ರೈ ಹೆಚ್, ಎಂ. ಆರ್. ಪ್ರದೀಪ್ ಕುಮಾರ್ ಶೆಟ್ಟಿ, ಅನೀಲ್ ಕುಮಾರ್ ಹೆಗ್ಡೆ ಬಿ.,ದಿನಕರ ರೈ ಡಿ., ಕಿಶೋರ್ ಶೆಟ್ಟಿ ಪಿ., ಶ್ರೀಮತಿ ಅಖಿಲಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸದಸ್ಯರು, ನೌಕರರ ವೃಂದವರು ಸಹಕರಿಸಿದರು.