23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 8.08 ಲಕ್ಷ ಲಾಭ, ಶೇ. 8 ಡಿವಿಡೆಂಟ್ ಘೋಷಣೆ

ಗೇರುಕಟ್ಟೆ: ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.22 ರಂದು ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಸಭಾ ಭವನದಲ್ಲಿ ನಡೆಯಿತು.

ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಜನಾರ್ಧನ ಗೌಡ ಕೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ರೂ. 8.08 ಲಕ್ಷ ನಿವ್ವಳ ಲಾಭ ಗಳಿಸಿ, ಶೇ. 8 ಡಿವಿಡೆಂಟ್ ಘೋಷಿಸಿದರು..

ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗುಲಾಬಿ ವಾರ್ಷಿಕ ಖರ್ಚು-ವೆಚ್ಚದ ವರದಿ ಮಂಡಿಸಿದರು

ಈ ಸಂದರ್ಭದಲ್ಲಿ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್ ಹರಿಪ್ರಸಾದ್, ಪಶು ವೈಧ್ಯಾಧಿಕಾರಿ ಡಾ.ಗಣಪತಿ, ಸಂಘದ ಉಪಾಧ್ಯಾಕ್ಷ ಸಿರಿಲ್ ಪಿಂಟೊ, ನಿರ್ದೇಶಕರಾದ ಕುಶಲಾವತಿ, ಪ್ರವೀಣ್ ಪೂಜಾರಿ, ಗಿರಿಯಪ್ಪ ಗೌಡ, ಕೇಶವ ಪೂಜಾರಿ, ರಂಜನ್ ಹೆಚ್, ನೆವಿಲ್ ಸ್ಟೀವನ್ ಮೋರಾಸ್, ವಸಂತ ನಾಯ್ಕ ಯೋಗಿನಿ, ಗಂಗಯ್ಯ ಗೌಡ, ಮೋಹನದಾಸ ಶೆಟಿ ರೇಖಾ ವೇದಿಕೆಯಲಿ ಉಪಸ್ಥಿತರಿದರು

2022-23ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಉರ್ಬನ್ ಮೋರಾಸ್, ವಲೇರಿಯನ್ ಡಿ.ಸೋಜ, ವೀರಪ್ಪ ಪೂಜಾರಿ ಗೌರವಿಸಿದರು. ಡೆಂಟಲ್ ಶಿಕ್ಷಣದಲ್ಲಿ 4 ಮತ್ತು 5 ನೇ ರ್‍ಯಾಂಕ್ ಪಡೆದ ಕುಮಾರಿ ಅನುದೀಕ್ಷಾ ಎಸ್.ಆರ್., ನಿವೃತ್ತ ಸೈನಿಕರಾದ ದಿನೇಶ್ ಗೌಡ ಕಲಾಯಿತೊಟ್ಟು, ಸುಭ್ರಮಣಿ ಐ.ಎಮ್.ಗೇರುಕಟ್ಟೆ, ರಾಜೇಶ್ ಕಾಮತ್ ಹಾಗೂ ಪ್ರಸ್ತುತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಬೇಬಿ ಗೌಡ ಪೇರಾಜೆ, ವಿಕ್ರಂ ವಂಜಾರೆ, ಪ್ರಮೋದ್ ಗೌಡ ಬರಾಯ, ಸೂರಜ್ ಶೆಟ್ಟಿ ನೆಲ್ಲಿಕಟ್ಟೆ ಇವರ ಪರವಾಗಿ ಪೋಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು. ಜಿಲ್ಲಾ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಗಳಿಸಿದ ನಾಗವೇಣಿ ಕೆ.ಎಸ್ ರವರನ್ನು ಸನ್ಮಾನಿಸಲಾಯಿತು.

ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವರ ಸಂಯೋಜನೆ ಮಾಡಿ ಸತೀಶ್ ಭಂಡಾರಿ ಗೇರುಕಟ್ಟೆ ರವರನ್ನು ಗೌರವಿಸಿದರು. ಹಾಲು ಉತ್ಪಾದಕರ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್.ಹರಿಪ್ರಸಾದ್ ಗೇರುಕಟ್ಟೆ, ದ.ಕ.ಹಾ.ಉ.ಮ.ಸಂ.ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಕಟ್ಟಡ ನಿರ್ಮಾಣ ಸಮಯದಲ್ಲಿ ಕಚೇರಿಗೆ ಕಟ್ಟಡದ ಸಹಕಾರ ನೀಡಿದ ಮೋಹನ ಗೌಡ ರವರನ್ನು ಗೌರವಿಸಿದರು.

ಸಂಘದ ನಿರ್ದೇಶಕ ರಂಜನ್ ಹೆಚ್ ಸ್ವಾಗತಿಸಿದರು. ಉಮೇಶ್ ಕೇಲ್ಡಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ನೆವಿಲ್ ಸ್ಟೀವನ್ ಮೋರಾಸ್ ಧನ್ಯವಾದವಿತ್ತರು.

Related posts

ಫೆ.12-16: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಜೇಎಸಿ ಆಫೀಸರ್ ಆಗಿ ಜೆಎಫ್ಎಮ್ ಚಿದಾನಂದ ಇಡ್ಯಾ ಆಯ್ಕೆ

Suddi Udaya

ಎ. 17-20: ಬಂದಾರು ಬಟ್ಲಡ್ಕ ಜಮಾಅತ್ ನಲ್ಲಿ ಉರೂಸ್ ಕಾರ್ಯಕ್ರಮ

Suddi Udaya

ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ: ಡಾ| ಡಿ ವೀರೇಂದ್ರ ಹೆಗ್ಗಡೆ

Suddi Udaya

ಅರಸಿನಮಕ್ಕಿ ಧ.ಗ್ರಾ. ಯೋಜನೆಯ ಎ ಮತ್ತು ಬಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya
error: Content is protected !!