ಗುರುವಾಯನಕೆರೆ: ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾಯನಕೆರೆ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ವಿಕಾಸ ಸದನ ಸಭಾಭವನದಲ್ಲಿ ಸೆ. 23 ರಂದು ನಡೆಯಿತು.
ಸಂಘವು ವರದಿ ಸಾಲಿನಲ್ಲಿ ರೂ.189 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.23 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಸದಸ್ಯರಿಗೆ ಶೇ. 14% ಡಿವಿಡೆಂಟ್ ಘೋಷಿಸಿದರು.
ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಸಂಘವು ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ದೊರಕಿವೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಯೋಗೀಶ್ ಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡೀಸ್, ಆಡಳಿತ ಮಂಡಳಿಯ ಸದಸ್ಯರಾದ ಮೋಹನ್ ಹೆಗ್ಡೆ, ಗೋಪಿನಾಥ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ ಕೆ,ಗ್ರೆಗೋರಿ ಡಿಮೆಲ್ಲೊ, ಪ್ರವೀಣ್ ಕುಮಾರ್ ಹೆಚ್.ಎಸ್, ಜಗದೀಶ್, ಶೇಖರ ನಾಯ್ಕ,ಒಲ್ವಿನ್ ಮೋನಿಸ್ ,ದಿನೇಶ್ ನಾಯಕ್ ಬಿ, ಪ್ರವೀಣ್ ಚಂದ್ರ ಮೆಹಂದಳೆ,ಮಮತಾ ಎಂ.ಶೆಟ್ಟಿ, ಪ್ರೇಮಾವತಿ ಭಟ್ ಉಪಸ್ಥಿತರಿದ್ದರು.
ಪಲ್ಲವಿ ಪೈ ಪ್ರಾರ್ಥಿಸಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಕುಮಾರ್ ಸ್ವಾಗತಿಸಿ, ವರದಿ ಮಂಡಿಸಿದರು. ಒಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನೌಕರ ವೃಂದದವರು, ಸಂಘದ ವಿವಿಧ ಬ್ರಾಂಚ್ ಗಳ ಶಾಖಾಧಿಕಾರಿಗಳು,ನಿತ್ಯ ನಿಧಿ ಸಂಗ್ರಾಹಕರು ಸಹಕರಿಸಿದರು.