25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಲಿಬಾಲ್ ಪಂದ್ಯಾಟದಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ತಂಗಡಿಯಲ್ಲಿ ಅದ್ದೂರಿ ಸ್ವಾಗತ

ಬಂದಾರು : ಮೈಸೂರಿನಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಸತತ 9ನೇ ಬಾರಿಗೆ ವಾಲಿಬಾಲ್ ಕ್ರೀಡಾಕಾಶಿಯಿಂದ ಆಯ್ಕೆಯಾದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಬಂದಾರು ಶಾಲಾ ತಂಡ ಫೈನಲ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೆಳಗಾಂ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನು ಉಜಿರೆ – ಬೆಳ್ತಂಗಡಿ- ಗುರುವಾಯನಕೆರೆ- ಕುಪ್ಪೆಟ್ಟಿ – ಪದ್ಮುಂಜ – ಮೈರೋಳ್ತಡ್ಕ – ಬಂದಾರು ಮಾರ್ಗವಾಗಿ ನಾಸಿಕ್ ಬ್ಯಾಂಡ್ ಮೂಲಕ ವೈಭವಪೂರ್ಣ ಮೆರವಣಿಗೆಯ ಮೂಲಕ ಸೆ.24 ರಂದು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷರಾದ ಜಯಂತ ಕೋಟ್ಯಾನ್, ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮೋಹನ್ ಬಂಗೇರ, ಬಂದಾರು ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಿನ್ನಿಕಲ್ಲು , ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಮಂಡಲ ಯುವ ಮೋರ್ಚಾ ಸದಸ್ಯರಾದ ಗಿರೀಶ್ ಗೌಡ ಬಿ.ಕೆ ಬಂದಾರು, ಬಂದಾರು ಶಾಲೆಯ ಎಸ್.ಡಿ,ಎಮ್.ಸಿ ಅಧ್ಯಕ್ಷ ಉಮೇಶ್ ಗೌಡ ಪೊಯ್ಯೊಳೆ, ಜಗದೀಶ ಗೌಡ ಕೊಂಬೇಡಿ ಉಪಸ್ಥಿತರಿದ್ದರು.

Related posts

ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ನಾವೂರು :ಗೋಪಾಲ ಕೃಷ್ಣ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಆಚರಣೆ

Suddi Udaya

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya

ಉಜಿರೆ ಎಸ್‌.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya
error: Content is protected !!