ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ.229.55 ಕೋಟಿ ವ್ಯವಹಾರ-ರೂ.82.10 ಲಕ್ಷ ಲಾಭ- ಶೇ 10.50 ಡಿವಿಡೆಂಡ್

Suddi Udaya


ಬಾರ್ಯ : ಬಾರ್ಯ ಪ್ರಾ.ಕೃ.ಪ.ಸ.ಸಂಘ ಮೂರುಗೋಳಿ ಇದರ ಮಹಾಸಭೆಯು ಸೆ.24 ರಂದು ಸಂಘದ ವಠಾರ ಬಾರ್ಯ ಗ್ರಾ.ಪಂ. ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ ಪಿ. ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘವು ಎರಡು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 2022-23ನೇ ಸಾಲಿನಲ್ಲಿ ಸದಸ್ಯರಿಗೆ 38.75 ಕೋಟಿ ಸಾಲ ವಿತರಿಸಲಾಗಿದ್ದು ವರ್ಷಾಂತ್ಯಕ್ಕೆ 46.60 ಕೋಟಿ ಹೊರಬಾಕಿ ಸಾಲ ಹೊಂದಿದ್ದು ಹಾಗೂ ಸದಸ್ಯರ ಸಹಕಾರದಿಂದ 20.26 ಕೋಟಿ ಠೇವಣಿ ಹೊಂದಿದೆ. ಸಂಘವು ಸತತ 21 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ’ಎ’ ಶ್ರೇಣಿ ಹೊಂದಿದೆ. ವರ್ಷಾಂತ್ಯಕ್ಕೆ 4.21 ಕೋಟಿ ಪಾಲು ಬಂಡವಾಳ ಹಾಗೂ 229.55 ಕೋಟಿ ವ್ಯವಹಾರವನ್ನು ಮಾಡಿ 82.10 ಲಕ್ಷ ಲಾಭ ಗಳಿಸಿದೆ. ಶೇಕಡಾ 10.50 ರಂತೆ ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಪ್ರವೀಣ್ ರೈ ಘೋಷಿಸಿದರು.
ಸಂಘವು ಸದಸ್ಯರಿಗೆ ಗರಿಷ್ಠ ಪ್ರಮಾಣದ ಸೇವೆಯನ್ನು ನೀಡುತ್ತಿದ್ದು ನ್ಯಾಯ ಬೆಲೆ ಅಂಗಡಿ ಸೇವೆಯನ್ನು ಒದಗಿಸುತ್ತಿದೆ. ಸಂಘದ ಸದಸ್ಯರಾದ ಜೆರಾಮ್ ಬ್ಲಾಗ್ಸ್, ಮೋನಪ್ಪ ಗೌಡ ಮನಿಲ, ಕಷ್ಣಪ್ಪ ಪೂಜಾರಿ ಪ೦ರ್ದ, ಸುಧಾಕರ ಸಾ೦ತ್ಕಳ್ಳಿ ಸಮಾದ್ ಕುಂಡಡ್ಕ, ಶಶಿಧರ್ ಪಿಲ್ಯ , ಗೋಪಾಲಕೃಷ್ಣಯ್ಯ ಪುತ್ರಿಲ, ಬ್ಯಾಂಕಿನ ಅಭಿವೃದ್ಧಿ ಬಗ್ಗೆ ಸಲಹೆಗಳನ್ನು ನೀಡಿದರು.


ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರವೀಣ್ ಮೂರುಗೋಳಿ, ಅಶ್ರಫ್ ಸರಳಿಕಟ್ಟೆ, ಮತ್ತು ಯುವ ಪ್ರತಿಭೆ ಕು| ಕನ್ನಿಕಾ ಸಾಂತ್ಯಳ್ಳಿ ಇವರನ್ನು ಸನ್ಮಾನಿಸಲಾಯಿತು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿಯ ೧೭ಮಂದಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ನೀಡಲಾಯಿತು.


ಕು| ಪ್ರಥ್ವಿ ಕಜೆಮಾರ್ ಪ್ರಾರ್ಥನೆ ಹಾಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ.ಟಿ ಲೆಕ್ಕ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಶಿವರಾಮ ಸ್ವಾಗತಿಸಿದರು. ನಿರ್ದೇಶಕರಾದ ರಾಜೇಶ್ ರೈ ಧನ್ಯವಾದವಿತ್ತರು.

ಸಂಘದ ನಿರ್ದೇಶಕರಾದ ಪ್ರಸನ್ನ ಯನ್, ಪ್ರತಾಪ್, ಶೇಷಪ್ಪ ಸಾಲಿಯಾನ್, ಅಶ್ರಫ್, ಪಾಶ್ವನಾಥ್ ಜೈನ್, ಶ್ರೀಮತಿ ಲಿಡಿಯಾ ಬ್ರಾಗ್ಸ್, ಶ್ರೀಮತಿ ಸವಿತಾ ವೃತ್ತಿಪರ ನಿರ್ದೇಶಕರಾದ ಕಿರಣ್ ಡಿ.ಶೆಟ್ಟಿ, ಶೇಖರ್ ಬೋಳ್ದಡ್ಕ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಶಾಖಾ ಮ್ಯಾನೇಜರ್ ಶಶಿಧರ ಅಡಪ, ಲೆಕ್ಕಿಗ ಶ್ರೀಮತಿ ರೋಹಿಣಿ.ಜಿ., ನವೀನ್ ಕುಮಾರ್ ಎಂ, ಶ್ರೀಮತಿ ರತ್ನಾವತಿ, ವೆಂಕಪ್ಪ ಎ, ಪ್ರವೀಣ್ ಬಿ. ಹಾಗೂ ಧನುಶ್, ರಕ್ಷಿತ್ ಕುಮಾರ್, ಕು| ಅನುಶಾ, ಅಬೂಬಕ್ಕರ್, ಶ್ರೀಧರ್, ಸರಾಫರಾದ ಹರಿಶ್ಚಂದ್ರ, ಸ್ವಚ್ಛತೆಗಾರರಾದ ವಸಂತಿ, ಶೇಖರ, . ನವೋದಯ ಪ್ರೇರಕರಾದ ಲೋಕೇಶ್, ಸರಾಫ ಹರೀಶ್, ಪಿಗ್ಮಿ ಸಂಗ್ರಾಹಕರಾದ ಹೈದರ್ ಮತ್ತು ಯೋಗಿಶ್ ಸಹಕರಿಸಿದರು.

Leave a Comment

error: Content is protected !!