25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ : ಜೆಸಿಐ ಬೆಳ್ತಂಗಡಿಗೆ ಅತ್ಯುತ್ತಮ ಘಟಕ ಸೇರಿದಂತೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ ಕಹಳೆ-2025 ಮಂಗಳೂರಿನ ಸ್ವಸ್ತಿಕ ವಾಟರ್ ಫ್ರಂಟ್ ಇಲ್ಲಿ ನಡೆಯಿತು. ಜೆಸಿಐ ಬೆಳ್ತಂಗಡಿಯ ಕಾರ್ಯಕ್ರಮಗಳನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಲಭಿಸಿರುತ್ತದೆ, ಸಮುದಾಯದ ಅಭಿವೃದ್ಧಿ, ತರಬೇತಿ ವಿಭಾಗದ ಕಾರ್ಯಕ್ರಮಗಳು, ವ್ಯವಹಾರ ವಿಭಾಗದ ಕಾರ್ಯಕ್ರಮಗಳು, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ಕಾರ್ಯಕ್ರಮಗಳನ್ನು ಪರಿಗಣಿಸಿ ವಲಯದ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ ಹಾಗೂ ಜೇಸಿ ಸಪ್ತಾಹದ ವಿಶೇಷವಾಗಿ ಆಯೋಜನೆ ಮಾಡಿರುವುದಕ್ಕಾಗಿ ವಲಯದ ಅತ್ಯುತ್ತಮ ಜೆಸಿ ಸಪ್ತಾಹ ರನ್ನರ್ ಪ್ರಶಸ್ತಿ ಜೆಸಿಐ ಬೆಳ್ತಂಗಡಿ ತನ್ನ ಮುಡಿಗೇರಿಸಿಕೊಂಡಿದೆ. ಅದಲ್ಲದೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ಒಟ್ಟು 15 ಮನ್ನಣೆಗಳು ಜೆಸಿಐ ಬೆಳ್ತಂಗಡಿಗೆ ಒದಗಿ ಬಂದಿದೆ.

ಜೆಸಿಐ ಬೆಳ್ತಂಗಡಿಯ ಸದಸ್ಯ ಅನುದೀಪ್ ಜೈನ್ ಇವರು ಅತ್ಯುತ್ತಮ ಸದಸ್ಯ ವಿನ್ನರ್ ಪ್ರಶಸ್ತಿ ಪಡೆದರೆ ಈ ವರ್ಷದ ನೂತನ ಸದಸ್ಯೆ ಭವ್ಯಶ್ರೀ ಕೀರ್ತಿರಾಜ್ ಇವರು ಅತ್ಯುತ್ತಮ ನೂತನ ಮಹಿಳಾ ಸದಸ್ಯೆ ರನ್ನರ್ ಪ್ರಶಸ್ತಿ ಪಡೆದಿರುತ್ತಾರೆ.


ಜೆಸಿಐ ಭಾರತದ ವಲಯ 15ರ ವಲಯ್ಯಾಧ್ಯಕ್ಷ ಜೆಸಿಐ ಸೆನೇಟರ್ ಅಭಿಲಾಶ್ ಬಿಎ ಇವರು ಈ ಪ್ರಶಸ್ತಿಗಳನ್ನು ಘಟಕ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಹಾಗೂ ತಂಡಕ್ಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಪ್ರಾಂತ್ಯ ‘ಡಿ’ಯ ವಲಯ ಉಪಾಧ್ಯಕ್ಷ ರಂಜಿತ್ ಎಚ್‌ಡಿ ಇತರ ಪ್ರಾಂತ್ಯದ ಉಪಾಧ್ಯಕ್ಷರುಗಳು ಪೂರ್ವ ವಲಯ್ಯಾಧ್ಯಕ್ಷರುಗಳು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಸುಮಾರು 60 ಘಟಕಗಳ ಅಧ್ಯಕ್ಷರುಗಳು ಸಾವಿರಕ್ಕೂ ಹೆಚ್ಚು ಜೆಸಿಐನ ಸದಸ್ಯರು ಉಪಸ್ಥಿತರಿದ್ದರು.

ಎರಡು ದಿನದ ಈ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿಯ ಘಟಕ ಅಧ್ಯಕ್ಷೆ ಆಶಾಲತಾ ಪ್ರಶಾಂತ್ , ಕಾರ್ಯದರ್ಶಿ ಪ್ರಮೋದ್ ಕೆ, ಕೋಶಾಧಿಕಾರಿ ರಕ್ಷಿತ್ ಅಂಡಿಂಜೆ , ಸದಸ್ಯರಾದ ರಾಘವೇಂದ್ರ ಪೂಜಾರಿ, ರಮ್ಯಾ ಗೌಡ ಉಜಿರೆ, ಶೈಲೇಷ್ ಕೆ, ಅನುದೀಪ್ ಜೈನ್, ಭವ್ಯಶ್ರೀ ಕೀರ್ತಿರಾಜ್, ಸುದೀಪ್ ಸಾಲ್ಯಾನ್ ಪೂರ್ವ ಅಧ್ಯಕ್ಷರಾದ ವಸಂತ್ ಶೆಟ್ಟಿ ಶ್ರದ್ಧಾ, ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಶಂಕರ ರಾವ್ ವಲಯ ಸಮ್ಮೇಳನದಲ್ಲಿ ಭಾಗವಹಿಸಿದರು.

Related posts

ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ

Suddi Udaya

ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya

ಕಾಡ್ಗಿಚ್ಚು, ಹುಲಿ ಗಣತಿ ಹಿನ್ನೆಲೆ ಪ್ರವಾಸಿಗರ ಸಂಚಾರಕ್ಕೆ ವಿಧಿಸಿದ್ದ ನಿಷೇಧ ತೆರವು: ಜೂ.1 ರಿಂದ ಪ್ರವಾಸಿಗರಿಗೆ ಚಾರಣ, ಜಲಪಾತ ವೀಕ್ಷಣೆಗೆ ಅವಕಾಶ

Suddi Udaya

ಕರಾಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬೊಮ್ಮಯ ಬಂಗೇರ ಆಯ್ಕೆ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಿಂದ ಗುರುವಾಯನಕೆರೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಆರಂಭ

Suddi Udaya

ಬೆಳ್ತಂಗಡಿ: ದಲಿತ ಮುಖಂಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಚಂದು ಎಲ್. ನಿಧನ

Suddi Udaya
error: Content is protected !!