ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬೆಳ್ತಂಗಡಿ, ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆ
ಗಾಂಧಿಜಯಂತಿ; ಸಂಭ್ರಮಾಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಅ.೨ರಂದು ಶ್ರೀ ಧ.ಮಂ ಕಲಾಭವನದಲ್ಲಿ ಜರುಗಲಿದೆ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಟ್ರಸ್ಟ್‌ನ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ. ಅಧ್ಯಕ್ಷತೆ ಹರೀಶ್ ಪೂಂಜ ವಹಿಸಲಿದ್ದು, ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ವಹಿಸಲಿದ್ದಾರೆ. ಆಶೀರ್ವಚನವನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರ. ವಂ, ಸ್ವಾಮಿ ವೊಲ್ಡರ್ ಒಸ್ಟಲ್ ಡಿ’ಮೆಲ್ಲೊ ಪ್ರಧಾನ ಧರ್ಮಗುರುಗಳು ಹೋಲಿ ರೆಡಿಮ ಚರ್ಚ್, ಬೆಳ್ತಂಗಡಿ, ಮೌಲಾನ ಅಶ್ರಫ್ ಹಿಮಾಮಿ ಧರ್ಮಗುರುಗಳು, ಜುಮ್ಮಾ ಮಸೀದಿ, ಹೊಸನಗರ ನೀಡಲಿದ್ದಾರೆ.
ಸಾಧಕರಿಗೆ ಸನ್ಮಾನವನ್ನು ಡಾ| ಎಲ್. ಹೆಚ್. ಮಂಜುನಾಥ್ ನೆರವೇರಿಸಲಿದ್ದಾರೆ. ಕು. ಸಹನಾ ಕುಂದರ್, ನ್ಯಾಯವಾದಿಗಳು, ಉಡುಪಿ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪದ್ಮನಾಭ ಶೆಟ್ಟಿ ಅಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ದ.ಕ., ಆರ್. ಬಿ. ಹೆಬ್ಬಳ್ಳಿ, ಉದ್ಯಮಿಗಳು, ಮು೦ಬೈ ಭಾಗವಹಿಸಲಿದ್ದಾರೆ. ಕೆ. ವಸಂತ ಸಾಲ್ಯಾನ್, ಸ್ಥಾಪಕಾರ ಕರು, ಜನಜಾಗೃತಿ ವೇದಿಕೆ, ರೊನಾಲ್ಡ್ ಡಿ’ಸೋಜಾ, ಅಕ್ಷಕರು, ಜನಜಾಗೃತಿ ವೇದಿಕೆ ಬಂಟ್ವಾಳ, ಮಹಾಬಲ ಕುಲಾಲ್, ನಿರ್ದೇಶಕರು, ದಕ-೧ ಜಿಲ್ಲೆ, ಸೀತಾರಾಮ ಆ ಕೇಂದ್ರ ಒಕ್ಕೂಟದ ಅಧ್ಯಕ್ಷರು, ಸದಾನಂದ ಬಂಗೇರ, ಕೇ೦ದ್ರ ಒಕ್ಕೂಟದ ಅಧ್ಯಕ್ಷರು, ಗುರುವಾಯನಕೆರೆ, ಚಿದಾನಂದ ರೈ, ಕಕ್ಯ ಕೇಂದ್ರ ಒಕ್ಕೂಟದ ಅಧ್ಯಕ್ಷರು, ಬಂಟ್ವಾಳ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.