April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೋಳಿಯಂಗಡಿ ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿವಾಹ ಕಾರ್ಯಕ್ರಮ

ಬೆಳ್ತಂಗಡಿ: ವೇಣೂರು ಸಮೀಪದ ಗೋಳಿಯಂಗಡಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಿನ್ಹಾಜುಲ್ ಹುದಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೆ. 24 ರಂದು ಉಳ್ತೂರು ಮಸೀದಿಯಲ್ಲಿ ಅನಾಥ ಹುಡುಗಿಯ ಉಚಿತ ವಿವಾಹ ಕಾರ್ಯಕ್ರಮ ಸಾಂಪ್ರದಾಯ ಬದ್ಧವಾಗಿ ನೆರವೇರಿತು.

ನಿಖಾಹ್ ಮತ್ತು ದುಆ ನೇತೃತ್ವವನ್ನು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಉಪಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ವಹಿಸಿದ್ದರು. ಉಳ್ತೂರು ಮುದರಿಸ್ ಮೌಲಾನಾ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಮುಖ್ಯ ಪ್ರಭಾಷಣ ನಡೆಸಿದರು. ಸಿರಾಜುದ್ದೀನ್ ಝುಹ್ರಿ ಉಳ್ತೂರು, ಸಮಿತಿ ಅಧ್ಯಕ್ಷ ಬದ್ರುದ್ದೀನ್ ಲತೀಫಿ ಸೇರಿದಂತೆ ಹಲವು ಉಲಮಾ ಉಮರಾಗಳು ಊರ ಪರ ಊರಿನ ಗಣ್ಯರು ಭಾಗವಹಿಸಿದ್ದರು.
ಉಳ್ತೂರು ಜಮಾಅತ್ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಉಳ್ತೂರು ಸ್ವಾಗತಿಸಿದರು.
ಮಿನ್ಹಾಜ್ ಸಮಿತಿಯ ಚೇರ್ಮೆನ್ ಬದ್ರುದ್ದೀನ್ ಲತೀಫಿ ಪ್ರಸ್ತಾವನೆಗೈದರು. ಮುಂದೆಯೂ ಸಮಿತಿ ವತಿಯಿಂದ ಇಂತಹಾ ಜೀವ ಕಾರುಣ್ಯ ಕಾರ್ಯಕ್ರಮ ಗಳನ್ಮು ದಾನಿಗಳ ಸಹಕಾರದೊಂದಿಗೆ ನಡೆಸುವ ಬಗ್ಗೆ ಪಣ ತೊಡಲಾಯಿತು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

Suddi Udaya

ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

Suddi Udaya

ಶಿಶಿಲ ಸೃಷ್ಟಿ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

Suddi Udaya

ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

Suddi Udaya

ಕುದ್ಯಾಡಿ ಸ. ಕಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!