September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

ನಿಡ್ಲೆ: ಪಿಲಿಕಜೆ ಬೈಲುವಾರು ಸಮಿತಿಯ ವತಿಯಿಂದ ಇತ್ತೀಚೆಗೆ ಶ್ರಮದಾನ ನಡೆಯಿತು. ಪ್ರತಿವರ್ಷದಂತೆ 7ನೇ ವರ್ಷದ ಶ್ರಮದಾನವು ನಿಡ್ಲೆ ರಾಜ್ಯ ಹೆದ್ದಾರಿಯಿಂದ ಪಟ್ರಮೆ ಜಿ.ಪಂ ರಸ್ತೆಯ 2 ಬದಿಯ ಗಿಡಗಂಟಿ ಕಡಿದು ಪ್ರಯಾಣಿಕರ ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಿದರು.

ಡಾಂಬರು ರಸ್ತೆ ಅಲ್ಲಲ್ಲಿ, ದೊಡ್ಡದಾದ ಹೊಂಡಗಳಿಗೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು. ಕಳೆಕೊಚ್ಚುವ ಯಂತ್ರವನ್ನು ಲಕ್ಷ್ಮಣ ಗೌಡ ನಂಜಿಲ, ಕೃಷ್ಣಪ್ರಸಾದ್ ಐತೂರು, ಪದ್ಮನಾಭ ನಕ್ಕರೆ ಪದ್ಮಯ್ಯಗೌಡ ಪಿಲಿಕಜೆ, ಪೂವಪ್ಪ ಗೌಡ ಪರಾಂಡ, ಚೀಂಕ್ರ ಮಾಪಲಾಜೆ, ಬೆಳಗಿನ ಉಪಹಾರವನ್ನು ರಾಜೇಶ್ ಉಳ್ಳಾಲ್ತಿ ಚಿಕನ್ ಸೆಂಟರ್ ನಿಡ್ಲೆ ಹಾಗೂ ಪಿಕಪ್ ವ್ಯವಸ್ಥೆಯನ್ನು ಜಿತೇಂದ್ರ ಶೆಟ್ಟಿ, ಪೆಟ್ರೋಲ್ ವ್ಯವಸ್ಥೆಯನ್ನು ಯಾದವ್ ಸಣಿಲ, ಊಟದ ವ್ಯವಸ್ಥೆಯನ್ನು ಅಧ್ಯಕ್ಷರಾದ ಹೊನ್ನಪ್ಪಗೌಡ ಹಿರಿಂಬಿ, ತಂಪು ಪಾನೀಯ ವ್ಯವಸ್ಥೆಯನ್ನು ನಾರಾಯಣ ಮಾಪಲಾಜೆ, ಜಯಪ್ರಸಾದ್ ಪರಾಂಡ, ಗೋವಿಂದಗೌಡ, ಶಂಕರಡ್ಡ, ಪುಷ್ಪರಾಜ್ ಪಿಲಿಕಜೆ, ವಸಂತ ಶಂಕರಡ್ಡ ಇವರೆಲ್ಲರು ಕೊಟ್ಟು ಸಹಕರಿಸಿದರು.

ರಾಮಣ್ಣ ಗೌಡ ಹೊಸಮನೆ ಪೆರ್ಲೆ ಹಾಗೂ ಚಿದಾನಂದ ಶೆಟ್ಟಿ ಸಹಕರಿಸಿದರು. ಪಿಲಿಕಜೆ ಬೈಲುವಾರು ಸಮಿತಿಯ ಕಾರ್ಯದರ್ಶಿಯರಾದ ಅಶೋಕ ಪಿಲಿಕಜೆ ಧನ್ಯವಾದ ಸಲ್ಲಿಸಿದರು.

Related posts

ಬಿ.ಸಿ.ರೋಡ್ ಬಸ್‌ ನಿಲ್ದಾಣದಲ್ಲಿ ಯುವತಿಯ ಹತ್ಯೆ : ಆರೋಪಿ ಪರಾರಿ

Suddi Udaya

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

Suddi Udaya

ಮುಂಡಾಜೆ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ‌ ಬಕ್ರೀದ್ ಆಚರಣೆ-ಸಾಮೂಹಿಕ ಪ್ರಾರ್ಥನೆ

Suddi Udaya

ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಆಚರಣೆ

Suddi Udaya

ರಾಜ್ಯ ಮಟ್ಟದ ಕರಾಟೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ಅವ್ನಿಶ್ ಬೈಜು ರಿಗೆ ಬೆಳ್ಳಿ ಪದಕ

Suddi Udaya

ಬಂದಾರು: ಶಾಲಾ ಅಕ್ಷರ ದಾಸೋಹ ಕೊಠಡಿಯ ಉದ್ಘಾಟನೆ: ಶಾಲಾ ಪೋಷಕರ ಸಭೆ

Suddi Udaya
error: Content is protected !!