25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ಲಯನ್ಸ್ ಝೋನ್ ಮಟ್ಟದ ಸೆಮಿನಾರ್

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಯ ಪ್ರಾಯೋಜಕತ್ವದಲ್ಲಿ ಪ್ರಾಂತ್ಯ-12 ರಲ್ಲಿ ವಲಯ -2 ರ ಝೋನ್ ಮಟ್ಟದ ಲಯನ್ಸ್ ಕ್ಲಬ್‌ಗಳ ಪಿಎಸ್‌ಟಿ ಸೆಮಿನಾರ್ ಲಯನ್ಸ್ ಭವನ ಬೆಳ್ತಂಗಡಿ ಯಲ್ಲಿ ಜರುಗಿತು.


ಜಿಲ್ಲಾ ಜಿಎಸ್‌ಟಿ ಕಾರ್ಡಿನೇಟರ್ ಲ. ಜಗದೀಶ್ ಎಡಪಡಿತ್ತಾಯ, ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ನಿತ್ಯಾನಂದ ನಾವರ, ಜಿಎಂಟಿ ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ರಾಜು ಶೆಟ್ಟಿ ಬೆಂಗೆತ್ಯಾರು, ಜಿಎಲ್‌ಟಿ ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ಧರಣೇಂದ್ರ ಕೆ ಜೈನ್, ಜಿಇಟಿ ಕೋರ್ಡಿನೇಟರ್ ಲ. ವಸಂತ ಶೆಟ್ಟಿ,ಡಿ ಜಿ ಪ್ರೋಗ್ರಾಂ ಬಗ್ಗೆ ಲ. ಶಿವಪ್ರಸಾದ್ ಹೆಗ್ಡೆ ಇವರುಗಳು ತರಬೇತಿ ನೀಡಿದರು.


ಮೂಡುಬಿದಿರೆ, ವೇಣೂರು, ಸುಲ್ಕೇರಿ ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಜರಿದ್ದರು.


ವಲಯಾಧ್ಯಕ್ಷ ಲ. ದಿನೇಶ್ ಎಂ. ಕೆ ರವರು ಪ್ರಮಾಣ ಪತ್ರ ವಿತರಿಸಿದರು. ಬೆಳ್ತಂಗಡಿ ಸುವರ್ಣ ವರ್ಷದ ಲಯನ್ಸ್ ಅಧ್ಯಕ್ಷ ಲ. ಉಮೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಲ. ಅನಂತಕೃಷ್ಣ ಧನ್ಯವಾದವಿತ್ತರು. ಲ. ಧರಣೇಂದ್ರ ಕೆ ಜೈನ್ ನಿರೂಪಿಸಿದರು.

Related posts

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya

ಗೇರುಕಟ್ಟೆ : ಕೊರಂಜ ಭಾರಿ ಮಳೆಗೆ ಚರಂಡಿ ನೀರು ಮನೆಯೊಳಗೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 46 ಮತದಾನ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

Suddi Udaya

ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

Suddi Udaya
error: Content is protected !!