ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ತಾಲೂಕು ದಸರಾ ಕ್ರೀಡಾಕೂಟ: ಭಾರತ ಕ್ರೀಡೆಯಲ್ಲೂ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬರುತ್ತಿದೆ: ಡಾ. ಸತೀಶ್ಚಂದ್ರ

ಬೆಳ್ತಂಗಡಿ: ದಕ ಜಿಲ್ಲಾಡಳಿತ, ದಕಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಬೆಳ್ತಂಗಡಿ, ಗ್ರಾಪಂ ಉಜಿರೆ, ಶಾಲಾ ಶಿಕ್ಷಣ ಇಲಾಖೆ,ಎಸ್ ಡಿಎಂ ಸ್ವಾಯತ್ತ ಕಾಲೇಜು ಉಜಿರೆ, ಯುವಜನ ಒಕ್ಕೂಟ,ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ದಸರಾ ಕ್ರೀಡಾಕೂಟವು ಉಜಿರೆಯ ಎಸ್ ಡಿಎಂ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸೆ.28 ರಂದು ಜರಗಿತು.


ಕ್ರೀಡಾಕೂಟವನ್ನು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿ “ಇತ್ತೀಚಿನ ವರ್ಷಗಳಲ್ಲಿ ಒಲಂಪಿಕ್ಸ್ ಸೇರಿದಂತೆ ವಿಶ್ವದ ಕ್ರೀಡಾಕೂಟಗಳಲ್ಲಿ ಭಾರತವು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ. ಭಾರತವು ಸಾಮಾಜಿಕವಾಗಿ ಆರ್ಥಿಕ ವಾಗಿ ಪ್ರಬಲ ರಾಷ್ಟ್ರ ಎಂದು ಗುರುತಿಸಲ್ಪಟ್ಟಿದ್ದು ಕ್ರೀಡೆಯಲ್ಲೂ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬರುತ್ತಿದೆ ಎಂದರು.


ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ ಯುವಜನರ ಸಾಧನೆ, ಪ್ರತಿಭಾ ಪ್ರೋತ್ಸಾಹಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ” ಎಂದರು.


ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಸುಜಯಾ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಬಿ., ಎಸ್.ಡಿ.ಎಂನ ಕ್ರೀಡಾ ಕಾರ್ಯದರ್ಶಿ ರಮೇಶ್, ರವಿ ವೈ.ನಾಯಕ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್,ತಾಲೂಕು ಯುವಜನ ಒಕ್ಕೂಟದ ನಿರ್ದೇಶಕ ಚಿದಾನಂದ ಇಡ್ಯಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಉಪಸ್ಥಿತರಿದ್ದರು.


ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ್ ರಾವ್ ನಿರೂಪಿಸಿದರು. ಸಂಯೋಜಕ ಸಾಂತಪ್ಪ ಕಲ್ಮಂಜ ಸ್ವಾಗತಿಸಿದರು. ಶಿಕ್ಷಕ ಶೀನಪ್ಪ ಗೌಡ ವಂದಿಸಿದರು.

Related posts

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು

Suddi Udaya

ಮರೋಡಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ-ಸಾಧಕರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಡಿಎ ದಿಗ್ದರ್ಶನ ಕಾರ್ಯಕ್ರಮ: ಜವಾಬ್ದಾರಿಯುತ ಪ್ರಜೆಯಾಗಿ ದೇಶಸೇವೆ ಮಾಡಲು ಲೆ.ಕ. ರೋಹಿತ್ ಪ್ರಕಾಶ್ ರೈ ಕರೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಮತ್ತು ಕಾಲೇಜಿನಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಬೆಳ್ತಂಗಡಿ ಸ.ಪ್ರಥಮ ದರ್ಜೆ ಕಾಲೇಜಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!