September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಇಂಜಿನಿಯರ್ ತಮ್ಮನ ಗೌಡ ಪಾಟೀಲ್ ಅವರಿಗೆ ಸನ್ಮಾನ

ಪೆರಾಡಿ: ಮರೋಡಿ ಗ್ರಾಮ‌ಪಂಚಾಯತ್ ನ ಗ್ರಾಮ ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರ ತಮ್ಮನ ಗೌಡ ಪಾಟೀಲ್ ಅವರನ್ನು ಗ್ರಾ.ಪಂ ವತಿಯಿಂದ ಸನ್ಮಾನಿಸಲಾಯಿತು.

ಹಲವಾರು ವರ್ಷಗಳಿಂದ ಮರೋಡಿ- ಪೆರಾಡಿ ಗ್ರಾಮದ ಅಭಿವೃದ್ಧಿಗೆ ತಮ್ಮನ ಪಾಟೀಲ್ ಅವರು ಇಂಜಿನಿಯರಿಂಗ್ ಇಲಾಖೆಯಿಂದ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ್ದು ಇದೀಗ ಸೇವೆಯಿಂದ ನಿವೃತ್ತಗೊಂಡಿರುವ ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಹಾರೈಸಿ ಮರೋಡಿ ಪಂ ಮಾಜಿ ಅಧ್ಯಕ್ಷ ಜಯಂತ್ ಕೋಟ್ಯಾನ್ ಹಾಗೂ ಮಂಜುಶ್ರೀ ಎಲೆಕ್ಟ್ರಿಕಲ್ ನ ಮಾಲಕ ರವಿ ಕುಲಾಲ್ ಸನ್ಮಾನ ನೇರವೇರಿಸಿದರು.

ಸನ್ಮಾನ ಸ್ವೀಕರಿಸಿ ತಮ್ಮನ ಗೌಡ ಪಾಟೀಲ್ ರವರು ಎಲ್ಲರ ಪ್ರೀತಿಗೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಜಯಂತ್ ಕೋಟ್ಯಾನ್, ಹೇಮರಾಜ್ ಬೆಳ್ಳಿಬೀಡು,ಪಂ ಅಧ್ಯಕ್ಷೆ ಪದ್ಮಶ್ರೀ ಜೈನ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎನ್ ಚಂದ್ರಶೇಖರ್,ಪಂ.ಅ.ಅಧಿಕಾರಿ ,ಪಂ ಉಪಾಧ್ಯಕ್ಷ ಯಶೋಧರ ಆಚಾರ್ಯ, ಸದಸ್ಯರಾದ ರತ್ನಾಕರ ಬುಣ್ಣನ್,ಉಮೇಶ್,ಅಶೋಕ್ ,ಶುಭರಾಜ ಹೆಗ್ಡೆ, ಧನಲಕ್ಷ್ಮಿ,ಉಮಾವತಿ,ಸವಿತಾ,ಸುನಂದ,ಯಶೋಧ,ಪಂ ಸಿಬ್ವಂದಿ ಗಣೇಶ್, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಿತ್ತಬಾಗಿಲು: ಮನೆಯ ಒಳಗೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಉರಗ ತಜ್ಞ ಸ್ನೇಕ್ ಜಾಯ್

Suddi Udaya

ಬೆಳ್ತಂಗಡಿ ಅಪರ ಸರ್ಕಾರಿ ವಕೀಲರಾಗಿ ಮನೋಹರ ಕುಮಾರ್ ನೇಮಕ

Suddi Udaya

ಧರ್ಮಸ್ಥಳ: ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya

ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 100 ಫಲಿತಾಂಶ

Suddi Udaya

ಆ.29ರಂದು ಮಹೇಶ್ ಶೆಟ್ಟಿ ತಿಮರೋಡಿ ದಂಪತಿ ಖುದ್ದು ಹಾಜರಾಗುವಂತೆ ಹೈ ಕೋರ್ಟ್ ಆದೇಶ

Suddi Udaya

ಅಕ್ರಮವಾಗಿ ಮಾದಕ ವಸ್ತು ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಅಂಝದ್‌ನನ್ನು ಬಂಧಿಸಿದ ಪುತ್ತೂರು ಪೊಲೀಸರು

Suddi Udaya
error: Content is protected !!