37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಕ್ಕಾವು ಸ.ಹಿ.ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಲೀಲಾ ರವರಿಗೆ ಅಭಿನಂದನಾ ಸಮಾರಂಭ

ಕುಕ್ಕಾವು ಸ.ಹಿ.ಪ್ರಾ. ಶಾಲೆಯಲ್ಲಿ 6 ವರ್ಷ 9 ತಿಂಗಳ ಕಾಲ ಸೇವೆ ಸಲ್ಲಿಸಿ ಪ್ರಸುತ್ತ ಸ.ಉ.ಹಿ.ಪ್ರಾ. ಶಾಲೆ ಬಜಿರೆಗೆ ವರ್ಗಾವಣೆಯಾದ ಶಿಕ್ಷಕಿ ಶ್ರೀಮತಿ ಲೀಲಾ ಬಿ. ಇವರನ್ನು ಶಾಲೆಯ ಮುಖ್ಯ ಶಿಕ್ಷಕಿ, ಸಹ ಶಿಕ್ಷಕಿ , ಅಂಗಡಿ ಸಿಬ್ಬಂದಿಗಳು ಎಸ್.ಡಿ.ಎಂ.ಸಿ ಪೋಷಕರು ಹಾಗೂ ಊರವರ ಪರವಾಗಿ ಅಭಿನಂದನಾ ಸಮಾರಂಭವು ನಡೆಯಿತು.

ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಬೇಬಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಿವಾನಂದ ರಾವ್ ಕಕ್ಕೆನೇಜಿ, ನೋಣಯ್ಯ ಪೂಜಾರಿ, ಗ್ರಾ.ಪಂ. ಸದಸ್ಯ ರಾಮಣ್ಣ ಕುಂಬಾರ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಪೂಜಾರಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಜಯಶ್ರೀ, ಮುಖ್ಯ ಶಿಕ್ಷಕ ನಾಗಪ್ಪ ಡಿ. ಉಪಸ್ಥಿತರಿದ್ದರು.

ಪೋಷಕರಾದ ಶ್ರೀಮತಿ ವೀಣಾ, ವಸಂತಲಕ್ಷ್ಮೀ, ಪೂರ್ಣಿಮಾ, ಬಶೀರ್, ಜಯಶ್ರೀ, ಹಾಗೂ ವಿದ್ಯಾರ್ಥಿಗಳಾದ ಸಾನಿಧ್ಯ, ಶ್ರಾವಣಿ, ಧನುಷ್, ಅನಿತಾ, ಅಭಿಜ್ಞಾ, ಶೀತಲ್, ಇವರುಗಳು ಅನಿಸಿಕೆ ವ್ಯಕ್ತಪಡಿಸಿದರು.

ಸಹಶಿಕ್ಷಕಿ ಸುಮಂಗಲಾ ಸನ್ಮಾನ ಪತ್ರ ವಾಚಿಸಿದರು. ದೇವಿದಾಸ್ ಧನ್ಯವಾದವಿತ್ತರು. ನೇತ್ರಾವತಿ ನಿರೂಪಿಸಿದರು.

Related posts

ಶಿಶಿಲ : ಮೀನಗಂಡಿ ನಿವಾಸಿ ಜಲಜಾಕ್ಷಿ ಆತ್ಮಹತ್ಯೆ

Suddi Udaya

ಜಾರಿಗೆಬೈಲು-ಮಚ್ಚಿನ ರಸ್ತೆ ಕಾಮಗಾರಿ ಸ್ಥಗಿತ: ಗ್ರಾಮಸ್ಥರಿಂದ ರಸ್ತೆ ತಡೆ

Suddi Udaya

ಉಜಿರೆ: ಭಜಕೆರೆ ಗೊಬ್ಬು-2025 ಸಮಾರೋಪ ಸಮಾರಂಭ

Suddi Udaya

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಪಡಂಗಡಿ ನೌಷದ್ ನಿವಾಸದ ಮೇಲೆ ಎನ್.ಐ.ಎ ದಾಳಿ

Suddi Udaya

ಶಿಶಿಲ : ಒಟ್ಲ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಚುನಾವಣೆಯಲ್ಲಿ ಶಾಸಕ ಹರೀಶ್ ಪೂಂಜರವರು ಗೆದ್ದು ಬರುವಂತೆ ಪ್ರಾರ್ಥನೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Suddi Udaya
error: Content is protected !!