ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya

ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಇತ್ತೀಚೆಗೆ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರವು ಕಾಲೇಜು ಸಭಾಂಗಣದಲ್ಲಿ ನೆರವೇರಿತು.

ಜಿ.ವಿ.ಸ್ಮಾರಕ ಆಸ್ಪತ್ರೆ ಮೂಡುಬಿದಿರೆ ಇಲ್ಲಿನ ವೈದ್ಯರಾದ ಡಾ||ಲಿಬಿನ್ ಮ್ಯಾಥ್ಯೂ ಇವರ ನೇತೃತ್ವದ ತಂಡವು ಉಚಿತ ಫಿಸಿಯೋಥೆರಪಿ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.ಅದೇ ರೀತಿ, ಡಾ||ರೆಮ್ಯಾ ಆರ್.ಇವರ ನೇತ್ರತ್ವದ ತಂಡವು ಉಚಿತ ಹೋಮಿಯೋಪಥಿಕ್ ತಪಸಣಾ ಶಿಬಿರವನ್ನು ನಡೆಸಿಕೊಟ್ಟಿತು.

ಕಾಲೇಜಿನ ಪ್ರಾಚಾರ್ಯರಾದ ವಂ.ಡಾ. ಆಲ್ವಿನ್ ಸೆರಾವೋ ಸ್ವಾಗತಿಸಿದರು. ಎನ್. ಎಸ್.ಎಸ್.ನ ಯೋಜನಾಧಿಕಾರಿ ಗಳಾದ ದಿನೇಶ್ ಬಿ.ಕೆ, ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಉಪನ್ಯಾಸಕರಾದ ಅವಿನಾಶ್ ಲೋಬೊ, ಸಂತೋಷ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಊರಿನ ಹಾಗೂ ಪರವೂರಿನ ನೂರಾರು ಜನರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Leave a Comment

error: Content is protected !!