27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

ಕಳೆಂಜ: ಕಳೆಂಜ, ಕುದ್ರಾಯ, ಬರೆಂಗಾಯ, ಕಾಯರ್ತಡ್ಕ, ಮಿಯ್ಯಾರು, ನೆರಿಯ ಹಾದೂ ಹೋಗುವ ಪಿಡಬ್ಲ್ಯೂ ರಸ್ತೆಯು ಕಳೆಂಜ ಗ್ರಾಮದ ಮರಕ್ಕಡ ಹೈಸ್ಕೂಲ್ ಸಮೀಪದಿಂದ ಮಿಯ್ಯಾರು ಹೊಸಂಗಡಿ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು ದೊಡ್ಡ ದೊಡ್ಡ ಹೊಂಡಗಳಿಂದ ಕೂಡಿದೆ.

ವಾಹನ ಸವಾರರಿಗೆ, ಶಾಲೆಗೆ ಹೋಗುವ ಶಾಲಾ ಮಕ್ಕಳಿಗೆ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ಕೆಲವು ದ್ವಿಚಕ್ರ ವಾಹನಗಾರರು ರಸ್ತೆಯ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ,


ಕಳೆದ ಅವಧಿಯಲ್ಲಿ ಸರಕಾರದ ಅನುದಾನದಿಂದ ರೂ.7 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಿಲಾನ್ಯಾಸಗೊಂಡಿದ್ದು ಆದರೆ ಈಗಿನ ಸರಕಾರವು ಸಾರ್ವಜನಿಕ ರಸ್ತೆ ಇನ್ನಿತರ ಕಾಮಗಾರಿಯ ಅನುದಾನವನ್ನು ಬಿಡುಗಡೆಗೊಳಿಸಲು ವಿಫಲವಾಗಿದೆ.

ಕೂಡಲೇ ಸರಕಾರ ತಡೆಹಿಡಿದ ಕಾಮಗಾರಿಗಳ ಅನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಗ್ರಾಮಸ್ಥರು ಸಿದ್ದತೆ ನಡೆಸುತ್ತಿದ್ದಾರೆ ಎಂದು ಕಳೆಂಜ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಎ.ಪಿ, ಹೋರಾಟಗಾರರಾದ ಉಮೇಶ್ ನಿಡ್ಡಾಜೆ, ರಾಜೇಶ್ ನಿಡ್ಡಾಜೆ, ನಿತಿನ್ ಅಶ್ವತ್ತಡಿ ಇವರುಗಳು ತಿಳಿಸಿರುತ್ತಾರೆ.

Related posts

ಮಚ್ಚಿನ: ಕಲ್ಲಗುಡ್ಡೆ ರಸ್ತೆಯಲ್ಲಿ ತುಂಬಿದ ನೀರು

Suddi Udaya

ಚಾರ್ಮಾಡಿ: ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ಬಾರ್ಯ ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya
error: Content is protected !!