23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ವ್ಯಾಪ್ತಿಯಲ್ಲಿನ ಮಡಂತ್ಯಾರು ವಲಯದ ಮಾರಿಕಾಂಬಾ ನಗರ, ಪಾರೆಂಕಿ ಗ್ರಾಮದ ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ ಒಂದು ಲಕ್ಷ ಅನುದಾನದ ಡಿ .ಡಿ.ಯನ್ನು ಗುರುವಾಯನಕೆರೆ ಯೋಜನಾ ಕಛೇರಿಯ ಯೋಜನಾಧಿಕಾರಿ ದಯಾನಂದ ಪೂಜಾರಿ ಮತ್ತು ಬೆಳ್ತಂಗಡಿ ಯೋಜನಾ ಕಛೇರಿಯ ತಾಲೂಕಿನ ಯೋಜನಾಧಿಕಾರಿ ಸುರೆಂದ್ರ ಇವರು ದೇವಸ್ಥಾನ ಸಮಿತಿಯವರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ರಾವ್ ಡಾ, ಕೆ.ಎಸ್ ಬಲ್ಲಾಳು ಕಾಂತಪ್ಪಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ಪಾರೆಂಕಿ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಹೆಗ್ಡೆ, ಯೋಗೀಶ್ ಹೆಗ್ಡೆ ವಲಯ ಮೇಲ್ವಿಚಾರಕ ವಸಂತಕುಮಾರ್, ಪಾರೆಂಕಿ ಗ್ರಾಮದ ಸೇವಾಪ್ರತಿನಿಧಿಗಳು ಶ್ರೀಮತಿ ಲೀಲಾವತಿ, ಶ್ರೀಮತಿ ಹರಿಣಾಕ್ಷಿ, ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆಯಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಮತ ಯಾಚನೆ

Suddi Udaya

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಹೊಸ ಆಡಳಿತದೊಂದಿಗೆ ಶುಭಾರಂಭ

Suddi Udaya

ಯುವವಾಹಿನಿ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭ

Suddi Udaya

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

Suddi Udaya

ಉಜಿರೆ ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಇದರ ವತಿಯಿಂದ ಪೌರತ್ವ ತರಬೇತಿ ಶಿಬಿರ ಸಮಾರೋಪ ಸಮಾರಂಭ

Suddi Udaya
error: Content is protected !!