September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ: ಎನ್ ಎಸ್ ಎಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ

ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಪದವಿ ಪೂರ್ವ ಕಾಲೇಜು ವತಿಯಿಂದ ಗಾಂಧಿ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ ಮಾಡಲಾಯಿತು. 

ಪ್ರಾಂಶುಪಾಲರಾದ  ವಂ.ಡಾ| ಆಲ್ವಿನ್ ಸೆರಾವೋ ಮಹಾತ್ಮ ಗಾಂಧೀಯವರ ಚಿಂತನೆಗಳು ಇಂದಿಗೆ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ವಿವರಿಸಿದರು. ಈದ್ ಮಿಲಾದ್ ಆಚರಣೆ ಸಹೋದರತೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ದಿನೇಶ್ ಬಿ ಕೆ, ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ರಿಚರ್ಡ್ ಮೊರಸ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೇಶವ್ ಶರ್ಮ ಹಾಗೂ ಕು.ಸಂಹಿತಾ ತುಳುಪುಳೆ  ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯಾದ ಕು.ಇಸ್ಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಹಮ್ಮದ್ ಬಾಷರ್ ಹಾಗೂ ತಂಡದವರು ಹಾಡಿನ ಮೂಲಕ ಈದ್ ಮಿಲಾದ್ ಸಂದೇಶವನ್ನು ಸಾರಿದರು.

Related posts

ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಪ್ರಸಾದ್ ಬೆಳಾಲು ಆಯ್ಕೆ

Suddi Udaya

ಮರುಮೌಲ್ಯಮಾಪನ: ಎಸ್‌ಡಿಎಂ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ಅದ್ಭುತ ಸಾಧನೆ

Suddi Udaya

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಗುರುವಾಯನಕೆರೆ ಸೇವಾ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಚಂದ್ರಯಾನ -3 ಯಶಸ್ವಿ ಸಂಭ್ರಮಿಸಿದ ಬೆಳ್ತಂಗಡಿ ಎಸ್ ಡಿಎಮ್ ಸ್ಕೌಟ್ ಗೈಡ್ಸ್ ನ ವಿದ್ಯಾರ್ಥಿಗಳು

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ 10 ಪ್ಲಸ್ ವಿಶೇಷ ಕಾರ್ಯಾಗಾರ

Suddi Udaya
error: Content is protected !!