ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಪದವಿ ಪೂರ್ವ ಕಾಲೇಜು ವತಿಯಿಂದ ಗಾಂಧಿ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ ಮಾಡಲಾಯಿತು.
ಪ್ರಾಂಶುಪಾಲರಾದ ವಂ.ಡಾ| ಆಲ್ವಿನ್ ಸೆರಾವೋ ಮಹಾತ್ಮ ಗಾಂಧೀಯವರ ಚಿಂತನೆಗಳು ಇಂದಿಗೆ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ವಿವರಿಸಿದರು. ಈದ್ ಮಿಲಾದ್ ಆಚರಣೆ ಸಹೋದರತೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ದಿನೇಶ್ ಬಿ ಕೆ, ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ರಿಚರ್ಡ್ ಮೊರಸ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೇಶವ್ ಶರ್ಮ ಹಾಗೂ ಕು.ಸಂಹಿತಾ ತುಳುಪುಳೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯಾದ ಕು.ಇಸ್ಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಹಮ್ಮದ್ ಬಾಷರ್ ಹಾಗೂ ತಂಡದವರು ಹಾಡಿನ ಮೂಲಕ ಈದ್ ಮಿಲಾದ್ ಸಂದೇಶವನ್ನು ಸಾರಿದರು.

previous post