ಧರ್ಮಸ್ಥಳ : ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆಯುತ್ತಿರುವ 25ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಹಾಗೂ ಭಜನೋತ್ಸವ ಸಮಾವೇಶ ಅ.4 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಖ್ಯಾತ ಗಾಯಕ ಇಳೈಯರಾಜ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ರುಗಳಾದ ಕೆ. ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್ ಶುಭಾಶಂಸನೆ ಮಾಡಿದರು.
ಕಾಯ೯ಕ್ರಮದಲ್ಲಿ ಶ್ರೀರಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ತಮಿಳುನಾಡಿನ ಹುಲಿಯರೈ ಸಿದ್ದಪ್ಪ ಸ್ವಾಮಿ, ಶ್ರೀಮತಿ ಹೇಮಾವತಿ ಹೆಗ್ಗಡೆ, ಡಿ.ಹಷೇ೯ಂದ್ರ ಕುಮಾರ್, ಸುಪ್ರೀಯ ಹಷೇ೯ಂದ್ರ ಕುಮಾರ್, ಹಿರೆಮಂಗಳೂರು ಕಣ್ಣನ್ , ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪೂಂಜ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂರು ಸಾವಿರ ಮಠದ ಶ್ರೀಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು.
ಬೆಳಿಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುನ್ನೂರು ಭಜನಾ ತಂಡಗಳ ಐದು ಸಾವಿರ ಭಜನಾ ಪಟುಗಳಿಂದ ಶೋಭಯಾತ್ರೆ ಮತ್ತು ನೃತ್ಯ ಭಜನೆ ನಡೆಯಿತು.
ಶ್ರೀ ಧ.ಮಂ. ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಮ್ಮಟ ಕಾಯ೯ದಶಿ೯ ಸುರೇಶ್ ಮೊಯಿಲಿ ವರದಿ ವಾಚಿಸಿದರು. ಶ್ರೀನಿವಾಸ್ ರಾವ್ ಮತ್ತು ಡಾ| ಐ ಶಶಿಕಾಂತ್ ಜೈನ್ ನಿರೂಪಿಸಿದರು. ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ.ಕೆ ಪುರುಷೋತ್ತಮ ಧನ್ಯವಾದವಿತ್ತರು.