23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಉಜಿರೆ ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿ ದೀಕ್ಷಿತಾ. ಕೆ ರವರಿಗೆ ಬೆಳ್ಳಿ ಪದಕ

ಬೆಳ್ತಂಗಡಿ: ಅ.1 ರಂದು ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನಡೆಸಿದ 14 ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬೆಳ್ತಂಗಡಿಯ ಯಮಾಟೋ ಶೊಟೊಖಾನ್ ಕರಾಟೆ ತರಗತಿಯ ವಿದ್ಯಾರ್ಥಿ ದೀಕ್ಷಿತಾ. ಕೆ ಇವರು -30 ಕೆ.ಜಿ ವಿಭಾಗದ ಕುಮಿತೆಯಲ್ಲಿ ಬೆಳ್ಳಿ ಪದಕ ವನ್ನು ಪಡೆದು ಡೆಹ್ರಾಡೂನ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ವೈಎಸ್‌ಕೆ ಬೆಳ್ತಂಗಡಿಯ ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಮತ್ತು ಕೋಚ್ ಮಿಥುನ್ ರವರಿಂದ ತರಬೇತಿ ಪಡೆಯುತ್ತಿದ್ದು ಇವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್‌ಟೇಬಲ್ ಕನಕರಾಜ್. ಆರ್ ಹಾಗೂ ಸುಮತಿ. ಕೆ ರವರ ಪುತ್ರಿಯಾಗಿದ್ದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್‌ಇ ಆಂಗ್ಲ ಮಾದ್ಯಮ ಶಾಲೆಯ 5 ನೇ ತರಗತಿಯ ಬಿ ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

Related posts

ಜೂ. 24: ಕೊಕ್ಕಡ ಮತ್ತು ಪಟ್ರಮೆಯಲ್ಲಿ ಜನರ ಬಳಿಗೆ -ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಪಾತ್ರೆ ಕೊಡುಗೆ

Suddi Udaya

ಮೇ 22: ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಿಯೋ ಕ್ಲಬ್ ಗೆ ‘ಉದಯೋನ್ಮುಖ ನಕ್ಷತ್ರ’ ಅವಾರ್ಡ್

Suddi Udaya

ಮುಂಡೂರು : ಸಂಘದ ಹಣವನ್ನು ಕಟ್ಟಲು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆ

Suddi Udaya

ರೆಖ್ಯ: ರಾಷ್ಟ್ರೀಯ ಹೆದ್ದಾರಿ 75ರ ಫ್ಲೈಓವರ್ ನಲ್ಲಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya
error: Content is protected !!