24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮೂಡಬಿದ್ರೆಯ ಶಿರ್ತಾಡಿ ಗ್ರಾಮದ ಲಕ್ಷ್ಮಣ ಪೂಜಾರಿ (62ವ) ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮಹಿಳೆ ಸಹಿತ ಇಬ್ಬರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.6ರಂದು ಸಂಜೆ ಶಿರ್ತಾಡಿಯ ಲಕ್ಷ್ಮಣ ಪೂಜಾರಿಯವರು ತನ್ನ ಹೆಂಡತಿಯ ತವರು ಮನೆಯಾದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನೆಕ್ಕರೆ ಎಂಬಲ್ಲಿ ತನ್ನ ಪ್ರಾಯಸ್ಥ ಮಾವನೊಂದಿಗೆ ಮನೆಯಂಗಳದಲ್ಲಿದ್ದಾಗ ಉಮೇಶ್ ಎಂಬಾತ ಮರದ ದೊಣ್ಣೆ ಹಿಡಿದುಕೊಂಡು ಜ್ಯೋತಿ ಎಂಬವರೊಂದಿಗೆ ಬಂದು ಅವ್ಯಾಚವಾಗಿ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಜ್ಯೋತಿ ಅವರು ಲಕ್ಷ್ಮಣ ಪೂಜಾರಿಯವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಲಕ್ಷ್ಮಣ ಪೂಜಾರಿಯವರ ಹೆಂಡತಿ ಮತ್ತು ಮಕ್ಕಳು ಹಲ್ಲೆ ನಡೆಸದಂತೆ ತಡೆದಾಗ ಉಮೇಶ್ ಅವರು ಲಕ್ಷ್ಮಣ ಪೂಜಾರಿಯವರಿಗೆ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ.


ಹಲ್ಲೆಯಿಂದ ಗಾಯಗೊಂಡ ಲಕ್ಷ್ಮಣ ಪೂಜಾರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ 64/2023 ಕಲಂ 504, 323,307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Related posts

ಎಸ್ ಎಸ್ ಎಲ್ ಸಿ ಫಲಿತಾಂಶ : ಉಜಿರೆ ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆ ಶೇ.99.34 ಫಲಿತಾಂಶ

Suddi Udaya

ನ.16-17: ಎಕ್ಸೆಲ್ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ, ಸಾಂಸ್ಕೃತಿಕ ವೈವಿಧ್ಯ

Suddi Udaya

ಮಾ.30 ರಂದು ವೇಣೂರು-ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suddi Udaya

ಬೈಲಹೊಂಗಲ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ನಾಳ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಡಿ. 23-24: ಗುರುವಾಯನಕೆರೆ ಎಕ್ಸೆಲ್ ಪಿ ಯು ಕಾಲೇಜಿನಲ್ಲಿ “ಎಕ್ಸೆಲ್ ಪರ್ಬ”

Suddi Udaya
error: Content is protected !!