ಬೆಳ್ತಂಗಡಿ : ಕಳೆಂಜ ಗ್ರಾಮದ ಅಮ್ಮಿನಡ್ಕದ ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅ.7 ರಂದು ಅಕ್ರಮವಾಗಿ ಮನೆ ನಿರ್ಮಾಣ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಅ.7 ರಂದು ರಾತ್ರಿ ಉಪ್ಪಿನಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ಜಯಪ್ರಕಾಶ್.ಕೆಕೆ ನೀಡಿದ ದೂರಿನ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಎಫ್.ಓ ನೀಡಿದ ದೂರಿನ ಪ್ರತಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ನಿಡ್ಲೆ ವಿಸ್ತೃತಾ ಬ್ಲಾಕ್ 2 ಮೀಸಲು ಅರಣ್ಯ ಪ್ರದೇಶದಲ್ಲಿ ಮೋಜಣಿ ಕಾರ್ಯನಿರ್ವಾಹಿಸುತ್ತಿರುವ ಸಮಯ 1:30 ಸಮಯಕ್ಕೆ ಸುಮಾರು 11 ಜನ ಆರೋಪಿಗಳು ಮತ್ತು ಇತರರು ಸೇರಿಕೊಂಡು ಏಕಾಏಕಿಯಾಗಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುದ್ವ ನಿವಾಸಿ ಒಂದು ದೇವಣ್ಣ ಗೌಡರ ಮಗ ಲೋಲಾಕ್ಷ ಯಾನೆ ಅನಂತು ರವರಿಗೆ ಅರಣ್ಯ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಲು ಒತ್ತುವರಿದಾರರ ಪರವಾಗಿ ನಿಂತು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಲಾದ ಲೋಲಾಕ್ಷ ಯಾನೆ ಅನಂತು, ಹರೀಶ್ ಕೊಯಿಲ, ಪ್ರಸನ್ನ ಮಾಣಿಗೇರಿ, ಯಶವಂತ ಗೌಡ, ನೊಣಯ್ಯ ಗೌಡ, ಜನಾರ್ಧನ ಗೌಡ, ಪದ್ಮನಾಭ ಗೌಡ , ಧನಂಜಯ ಗೌಡ,ರಾಮಚಂದ್ರ ಮೇಸ್ತ್ರಿ, ಶ್ರೀನಿವಾಸ್ ಗೌಡ, ಉದಯ ಗೌಡ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಆರ್.ಎಫ್.ಓ ಜಯಪ್ರಕಾಶ್.ಕೆ.ಕೆ ನೀಡಿದ ದೂರಿನ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ IPC 1860(U/s 353,143,149) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ,ಪೊಲೀಸರು ತನಿಖೆ ಮುಂದುವರಿಸಿದ್ದಾರೆ.