April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 15,16,17 ರಂದು ವೇಣೂರು, ಬೆಳ್ತಂಗಡಿ,ಉಜಿರೆ ರಾಜ ಮಾರ್ಗದಲ್ಲಿ ಸಾಗಲಿದೆ ಗೋ ರಥಯಾತ್ರೆ

ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನತೋಟ ಪುದು ಬಂಟ್ವಾಳ ಮತ್ತು ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಧರ್ಮ ರಕ್ಷಾರ್ಥರಾಷ್ಟ್ರ ರಕ್ಷಾರ್ಥ ಗೊರಕ್ಷಾರ್ಥ ನ.14 ರಿಂದ 22 ರ ವರೆಗೆ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವ ರಾಷ್ಟ್ರಹಿತಕ್ಕಾಗಿ ನಾರಾಯಣ ಕವಚ ಯಾಗ ನಡೆಯಲಿದೆ.

ಇದರ ಪೂರ್ವಭಾವಿಯಾಗಿ ಸೆ.24 ರಿಂದ ನ.8ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಗೋರಥ ಸಂಚಾರಿಸಲಿದ್ದು ಅ.14 ರಂದು ಕಾರ್ಕಳದಿಂದ ವೇಣೂರಿಗೆ ರಥಯಾತ್ರೆ ಪ್ರವೇಶ ಮಾಡಲಿದ್ದು ಅ.15ರಂದು ವೇಣೂರಿನಿಂದ ಬೆಳ್ತಂಗಡಿಗೆ ಅ.16 ಬೆಳ್ತಂಗಡಿಯಿಂದ ಉಜಿರೆಗೆ ಅ.17 ರಂದು ಉಜಿರೆಯಿಂದ ನೆಲ್ಯಾಡಿಗೆ ಸಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ನಾಲ್ಕೂರು: ಜಯಂತಿ ಮಜ್ಜೇನಿಗುರಿ ಅಸೌಖ್ಯದಿಂದ ನಿಧನ

Suddi Udaya

ಧರ್ಮಸ್ಥಳ ವ್ಯಾಪ್ತಿಯಲ್ಲಿ ಮೂರು ಬೈಕ್ ಮತ್ತು ಒಂದು ಕಾರು ಕಳ್ಳತನ ಪ್ರಕರಣ: ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐದು ಜನ ಆರೋಪಿಗಳ ಬಂಧನ

Suddi Udaya

ಬಟ್ಟೆಗಳ ಬೃಹತ್ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ ಶೇ.10 ಡಿಸ್ಕೌಂಟ್ ಸೇಲ್

Suddi Udaya

ಧಮ೯ಸ್ಥಳ ಮಹಾದ್ವಾರದ ಬಳಿ ಪಾದಯಾತ್ರಿಗಳಿಗೆ ಸ್ವಾಗತ

Suddi Udaya

ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆಗೆಯುವಂತೆ ಸ್ಥಳೀಯರ ಒತ್ತಾಯ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

Suddi Udaya
error: Content is protected !!