22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ : ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆಗೆ ಹಲವು ಪ್ರಶಸ್ತಿ: ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಅ. 7 ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ನೇತೃತ್ವದಲ್ಲಿ ಗೇರುಕಟ್ಟೆಯ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ನಿಖಿಲ್ ದೇವಾಡಿಗ 100 ಮೀಟರ್ ಮತ್ತು ಎತ್ತರ ಜಿಗಿತ ಪ್ರಥಮ ಹಾಗೂ 200 ಮೀಟರ್ ದ್ವಿತೀಯ, ದಿಯಾ ಚಂದನ ಎತ್ತರ ಜಿಗಿತ ಪ್ರಥಮ ಮತ್ತು ಈಟಿ ಎಸೆತ ದ್ವಿತೀಯ, ಅಂಕಿತ ಜೆ ಎನ್ ಚಕ್ರ ಎಸೆತ ಪ್ರಥಮ, ಸಂಜನಾ ಎ ಗುಂಡು ಎಸೆತ ಪ್ರಥಮ, ಹಿತೇಶ್ ಎತ್ತರ ಜಿಗಿತ ದ್ವಿತೀಯ, ಪ್ರತೀಕ್ಷಾ 400 ಮೀಟರ್ ದ್ವಿತೀಯ, ಚೇತನ ರೂಪ ಚಕ್ರಎಸೆತ ದ್ವಿತೀಯ, ಧೀರಜ್ ತ್ರಿವಿಧ ಜಿಗಿತ ದ್ವಿತೀಯ ಮತ್ತು 100 ಮೀಟರ್ ತೃತೀಯ, ಯಶ್ವಿನ್ ಉದ್ದ ಜಿಗಿತ ಪ್ರಥಮ ಹಾಗೂ ತ್ರಿವಿಧ ಜಿಗಿತ ತ್ರತೀಯ, ಸನ್ನಿಧಿ ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತ ಪ್ರಥಮ, ಸಲ್ಮಾ ಶಹನಾಝ್ – ಈಟಿ ಎಸತ- ಪ್ರಥಮ, ಶರಣ್ಯ ತ್ರಿವಿಧ ಜಿಗಿತ ದ್ವಿತೀಯ, 4×100 ಮೀಟರ್ ರಿಲೇ ಬಾಲಕರ ತಂಡ ದ್ವಿತೀಯ ಹಾಗೂ ಬಾಲಿಕೆಯರ ತಂಡ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.


ಒಟ್ಟು 10 ಪ್ರಥಮ ಸ್ಥಾನ, 5 ದ್ವಿತೀಯ, 5 ತೃತೀಯ ಸ್ಥಾನ ಹೀಗೆ ಒಟ್ಟು 20 ಪದಕಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಈ ಹಿಂದಿನ ದೈಹಿಕ ಶಿಕ್ಷಕರಾಗಿದ್ದ ಸತ್ಯಕಿರಣ್ ಕುಮಾರ್ ಉಡುಪಿ, ಪ್ರಸ್ತುತ ದೈಹಿಕ ಶಿಕ್ಷಕ ಆಗಿರುವ ಮೋಹನಂದ, ಹಾಗೂ ತರಬೇತುದಾರ ಸ್ನೇಹಿತ ರಾಜೇಶ್ ಇವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಉಪ ಪ್ರಾಂಶುಪಾಲರಾದ ಉದಯ್ ಕುಮಾರ್ ಬಿ ಇವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಗೇರುಕಟ್ಟೆ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಈಶ್ವರಿ , ದೈಹಿಕ ಶಿಕ್ಷಕರಾದ ಅಜಿತ್ ಕುಮಾರ್ ಕೆ, ಇದೇ ಸಂಸ್ಥೆಯ ಸಹ ಶಿಕ್ಷಕರಾದ ರಾಜೇಂದ್ರಕೃಷ್ಣ, ದಿನೇಶ್, ಹಾಗೂ ಮಮತಾ, ಆಶಾಲತಾ, ರಮ್ಯಾ, ಜ್ಯೋತಿ ಮತ್ತು ಸವಣಾಲು ಪ್ರೌಢಶಾಲೆಯ ಸಹ ಶಿಕ್ಷಕ ಸತೀಶ್ ಬಂಗೇರ , ಕೆಪಿಎಸ್ ಪುಂಜಾಲಕಟ್ಟೆಯ ಪ್ರೌಢಶಾಲಾ ಶಿಕ್ಷಕರಾದ ಧರಣೇಂದ್ರ ಕೆ, ಜಯಂತಿ ಹಾಗೂ ತರಬೇತುದಾರ ರಾಜೇಶ್ ಉಪಸ್ಥಿತರಿದ್ದರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

Suddi Udaya

ಬೆಳ್ತಂಗಡಿ: ಬೀದಿ ನಾಯಿಗೆ ಅಪಘಾತ: ಮಾನವೀಯತೆ ಮೆರೆದ ಡಾ. ರವಿಕುಮಾರ್

Suddi Udaya

ವೇಣೂರು: ಪಡ್ಡಂದಡ್ಕ ಕಟ್ಟೆ ನಿವಾಸಿ ಪ್ರಗತಿಪರ ಕೃಷಿಕ ಕೆ ಮಹಮ್ಮದ್ ನಿಧನ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಶ್ರವಣ್ ನೇಮಕ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ

Suddi Udaya

ಚಾರ್ಮಾಡಿ ಗ್ರಾ.ಪಂ. ನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya
error: Content is protected !!