ನಾವೂರು : ಕಳೆದ 24 ವರ್ಷಗಳ ಹಿಂದೆ ನಾವೂರಿನ ನವೋದಯ ಯುವಕ ಮಂಡಲದ ಸದಸ್ಯರ ಧಾರ್ಮಿಕ ಚಿಂತನೆಯೊಂದಿಗೆ ನಾವೂರು ಸರಕಾರಿ ಶಾಲೆಯಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿ ಹಬ್ಬ ಮಹೋತ್ಸವವು ಅ.20 ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಅ.8 ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೌರವ ಸಲಹೆಗಾರರು, ಮಾರ್ಗದರ್ಶಕ ಡಾ. ಪ್ರದೀಪ್ ಆಟಿಕುಕ್ಕೆ ಬಿಡುಗಡೆ ಗೊಳಿಸಿ ಶುಭಹಾರೈಸಿದರು.
ಶ್ರೀ ಶಾರದೋತ್ಸವದ ಬೆಳ್ಳಿಹಬ್ಬದ ಅಂಗವಾಗಿ ಡ್ಯಾಝಲ್ ಸ್ಟುಡಿಯೋ ಮೂಲ್ಕಿ ಅರ್ಪಿಸುವ “ಮಾಯೋಡ್ ಮೆರೆಯಿನ ಸತ್ಯೋಲ್ನ ಕಥೆ :ಕಾರ್ಣಿಕದ ಗತ ವೈಭವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಗ್ಮಿ, ಧಾರ್ಮಿಕ ಚಿಂತಕ ಕಾರ್ಕಳದ ಅಕ್ಷಯ ಗೋಖಲೆ ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಕಾರಿಂಜ, ಉಪಾಧ್ಯಕ್ಷರಾದ ಪ್ರಮೋದ್ ಸಾಲ್ಯಾನ್ ಮೋರ್ತಾಜೆ, ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯರುಗಳಾದ ಪ್ರದೀಪ್ ಗೌಡ ನಾಗಜೆ, ಕೃಷ್ಣಪ್ಪ ಪೂಜಾರಿ ಬೊಂತ್ರಪಾಲು, ಉದಯ ಬಂಗೇರ ಬೋಲೋಟ್ಟು, ಮೋಹನ ತಿಮರಡ್ಡ, ನವೀನ್ ಪೂಜಾರಿ, ವಸಂತ ಗೌಡ, ಶ್ರೀಮತಿ ಸುಮಾ ಕಿರ್ನಡ್ಕ ಉಪಸ್ಥಿತರಿದ್ದರು.