26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿಶ್ವ ಮಾನಸಿಕ ದಿನದ ಅಂಗವಾಗಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಮಾನಸಿಕ ದಿನಾಚರಣೆಯ ಪ್ರಯುಕ್ತ ಮಾನಸಿಕ ಆರೋಗ್ಯ ಮತ್ತು ಸಮಾಲೋಚನೆಯ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವು ಅ.10 ರಂದು ಸೆಮಿನಾರ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಖ್ಯಾತ ಮನೋರೋಗ ತಜ್ಞ ನಿವೃತ್ತ ಪ್ರಾಧ್ಯಾಪಕರು ಬೆಂಗಳೂರು ಅನೇಕೆರೆ ಸಮಾಧಾನ ಕೇಂದ್ರದ ಸಂಸ್ಥಾಪಕ ಸಿಆರ್ ಚಂದ್ರಶೇಖರ್ ಉದ್ಘಾಟಿಸಿ ಮಾತನಾಡಿ ಮನಸ್ಸು ಎಂಬುವುದು ಚಂಚಲವಾಗಿರುವಂತಹದ್ದು ಅದನ್ನು ಶಾಂತಿ ಆರೋಗ್ಯಕರವಾಗಿರಿಸಬೇಕು. ನಮ್ಮ ದೇಹ ಪ್ರಸನ್ನವಾಗಿರಬೇಕಾದರೆ ಮನಸ್ಸು ಪ್ರಸನ್ನವಾಗಿರಬೇಕು, ಕೊರೋನದ ನಂತರ ಆರೋಗ್ಯದ ಸಂಖ್ಯೆಗಿಂತ ಅನಾರೋಗ್ಯದ ಸಂಖ್ಯೆ ಹೆಚ್ಚಾಗಿದೆ. ಸಕಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಮಹತ್ವವಾದದ್ದು ಎಂದರು.

ಎಸ್‌ಡಿಎಂ ಕಾಲೇಜು ಪ್ರಾಂಶುಪಾಲರು ಡಾ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತೋಷದ ವಿಷಯ ಹಾಗೂ ಈ ಕಾರ್ಯಕ್ರಮಕ್ಕೆ ಸೂಕ್ತವಾದ ವ್ಯಕ್ತಿ. ಕಂಪ್ಯೂಟರ್ ಗೆ ಹೇಗೆ ಸಾಫ್ಟ್ ವೆರ್ ಅಗತ್ಯವೋ ಅದೇ ರೀತಿ ಮನುಷ್ಯನಿಗೆ ಮನಸ್ಸು. ಶಾಂತಿಯುತ ಮನಸ್ಸಿಗೆ ಯೋಗ, ಧ್ಯಾನ, ಪತ್ಯ ಆಹಾರ ಅಗತ್ಯ. ಈಗಿನ ಶಿಕ್ಷಣದ ಕ್ರಮಗಳು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಬೀರುತ್ತಾ ಇದೆ. ಕೊಲ್ಲುವಂತಹ ಮನಸ್ಸು ಹಾಗೂ ಪೋಷಿಸುವಂತಹ ಮನಸ್ಸು ನಮ್ಮಲ್ಲಿಯೇ ಇದೆ, ಯಾವುದು ಬೇಕು ಯಾವುದು ಬೇಡ ಎನ್ನುವಂತಹದನ್ನು ನಾವು ಆಯ್ಕೆ ಮಾಡಬೇಕು ಎಂದರು.

ಜಿ ಆರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ವಂದನಾ ಆರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನುಪ್ರಿಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ವರ್ಷಾ ಧನ್ಯವಾದವಿತ್ತರು.

Related posts

ಕಲಾಯ ಗುತ್ತು ಧರ್ಮಚಾವಡಿಯಲ್ಲಿ ಸಂಪತ್ ಬಿ. ಸುವರ್ಣರಿಗೆ ಅಭಿನಂದನೆ

Suddi Udaya

ಅಳದಂಗಡಿ: ವಯೋವೃದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಕೊಕ್ಕಡ ಜೇಸಿಐ ಕಪಿಲಾ ಘಟಕದಿಂದ ಶ್ರೀಧರ ರಾವ್ ಕೆ. ರವರಿಗೆ “ಕಪಿಲಾಶ್ರೀ 2025” ಪ್ರಶಸ್ತಿ

Suddi Udaya

ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಗುರುವಾಯನಕೆರೆ ಅರೆಮಲೆಬೆಟ್ಟಕ್ಕೆ ಭೇಟಿ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಲಾಯಿಲ ಕುಂಟಿನಿ ಬೂತ್ ಸಮಿತಿ ವತಿಯಿಂದ ಎಸ್.ಡಿ.ಪಿ.ಐ ಸಂಸ್ಥಾಪನ ದಿನಾಚರಣೆ

Suddi Udaya
error: Content is protected !!