ಕೊಕ್ಕಡ: ಜೇಸಿ ಕೊಕ್ಕಡ ಕಪಿಲಾ ಘಟಕದ ವತಿಯಿಂದ 2023 ನೇ ಸಾಲಿನಲ್ಲಿ 14 ಮಂದಿ ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂಪಾಯಿಗಳಂತೆ ಒಟ್ಟು 42,000 ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು.
ಭಾರತೀಯ ಜೆಸಿಐ ಸಂಸ್ಥೆಯು ಜೇಸಿಐ ಇಂಡಿಯಾ ಪೌಂಡೇಶನ್ ಎಂಬ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತದೆ. ಯುವ ಜನರಿಗೆ ವಿವಿಧ ತರಬೇತಿ, ಕಲ್ಯಾಣ ಕಾರ್ಯಕ್ರಮಗಳಿಗೆ ಸಾಕಷ್ಟು ಸಹಾಯ ವಿತರಿಸುತ್ತಿದೆ.
ಕೊಕ್ಕಡ ಘಟಕವು ಶಿಫಾರಸು ಮಾಡಿದ ನಿರೀಕ್ಷಾ, ಶ್ರಾವ್ಯ, ಅನನ್ಯ, ಶಿಲ್ಪಾ, ನಿಶಿತಾ, ಸುಮಾ, ಅಕ್ಷಯ್, ಮಾನ್ಯತಾ, ಹರ್ಷಿತಾ, ಯೋಗಿತಾ, ಶಿವಾನಂದ, ಪ್ರವೀಕ್ಷಾ, ಪವಿತ್ರ ಹಾಗೂ ದೀಕ್ಷಿತಾ ಇವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಯಿತು.
ಕೊಕ್ಕಡ ಜೇಸಿ ಸಂಸ್ಥೆಯ ಸದಸ್ಯರಾದ ಕೆ. ಶ್ರೀಧರ ರಾವ್ ಹಾಗೂ ಶ್ರೀಮತಿ ಜೆಸಿಂತಾ ಡಿ ಸೋಜ ಅವರು 2023 ನೇ ಸಾಲಿನಲ್ಲಿ ಜೇಸಿ ಪ್ರತಿಷ್ಠಾನಕ್ಕೆ ದಾನ ಕೊಡುವ ಮೂಲಕ ಬೆಂಬಲಿಸಿದ್ದಾರೆ.
ಈ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಮಾರ್ಗದರ್ಶನ ನೀಡಿದ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಹಾಗೂ ವಲಯಾಡಳಿತ ಮಂಡಳಿ, ಶಾಲಾ ಕಾಲೇಜುಗಳ ಮುಖ್ಯಸ್ಥರ ನೆರವಿಗೆ ಘಟಕಾಧ್ಯಕ್ಷ ಜಿತೇಶ್ ಎಲ್. ಪಿರೇರಾ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.