29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು: ಭಾರಿ ಸಿಡಿಲು ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿಗೆ ಮರ ಬಿದ್ದು ಹಾನಿ, ಪ್ರಾಣಾಪಾಯದಿಂದ ಪಾರು

ಇಂದಬೆಟ್ಟು: ಅ .12 ರಂದು ಸಂಜೆ ಬಾರಿ ಸಿಡಿಲು ಗಾಳಿ ಮಳೆಗೆ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಇಲ್ಲಿಯ ರವಿಚಂದ್ರ ಆಚಾರ್ಯ ರವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹಾನಿಗೊಳಗಾಗಿದೆ, ಅದೃಷ್ಟವಶಾತ್ ರವಿಚಂದ್ರ ಆಚಾರ್ಯ ಹಾಗೂ ಅವರ ಪತ್ನಿ, ಮೂರು ಸಣ್ಣ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್ ಬೆದ್ರಬೆಟ್ಟು, ಶ್ರೀಕಾಂತ್ ಎಸ್ ಇಂದಬೆಟ್ಟು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು ಸಹಕಾರ ನೀಡಿದರು ಮತ್ತು ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಪಂಚಾಯತ್ ಸದಸ್ಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿ ಕೊಂಡರು.

Related posts

ಸೇವಾಭಾರತಿ ಬೆಳ್ತಂಗಡಿ ತಾಲೂಕು ಇದರ 20ನೇ ವರ್ಷದ ಸಂಭ್ರಮ ಹಾಗೂ ರಕ್ತದಾನ ಶಿಬಿರ, ಸಾಧನ ಸಲಕರಣೆಗಳ ವಿತರಣೆ, ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

Suddi Udaya

ಪುಂಜಾಲಕಟ್ಟೆ: ‘ಸ್ವಾಸ್ತ್ಯ ಸಂಕಲ್ಪ’ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya

ಪಜಿರಡ್ಕ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರ ನ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಕಾರ್ಯಕ್ರಮ ಹಾಗೂ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya
error: Content is protected !!