23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವರನ್ನು ಅಂಬ್ಯುಲೆನ್ಸ್‌ನಲ್ಲಿ ವೇಣೂರಿನಿಂದ ಕೇವಲ 45 ನಿಮಿಷಗಳಲ್ಲಿ ಕೆಎಂಸಿ ಆಸ್ಪತ್ರೆಗೆ ತಲುಪಿಸಿದ ಚಾಲಕ ಪ್ರಸಾದ್

ವೇಣೂರು: ಗಂಭೀರ ಹೃದಯಾಘಾತವಾಗಿ ಜೀವಪಾಯದಲ್ಲಿದ್ದ ವ್ಯಕ್ತಿಯೋರ್ವರನ್ನು ಅಂಬ್ಯುಲೆನ್ಸ್‌ನಲ್ಲಿ ವೇಣೂರಿನಿಂದ ಕೇವಲ 40-45 ನಿಮಿಷಗಳಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತಲುಪಿಸಿದ ಪ್ರಸಾದ್ (ಪಚ್ಚು) ಕುಲಾಲ್ ರವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕುಕ್ಕೇಡಿ ಗ್ರಾಮದ ನಿವಾಸಿ ಹಿಂದೂ ಜಾಗರಣ ವೇದಿಕೆ ಹೆಸರಿನ ಅಂಬ್ಯುಲೆನ್ಸ್ ಚಾಲಕ ಪಚ್ಚು ಯಾನೆ ಪ್ರಸಾದ್ ಕುಲಾಲ್ ರವರು ಅ. 13 ರಂದು ಬೆಳಗ್ಗೆ 11.15ರ ಸುಮಾರಿಗೆ ವೇಣೂರು ನಮನ ಕ್ಲಿನಿಕ್‌ನಿಂದ ಅತ್ಯಂತ ಗಂಭೀರ ಸ್ವರೂಪದ ರೋಗಿಯನ್ನು ಕೇವಲ 45 ನಿಮಿಷಗಳಲ್ಲಿ ಅಂಬ್ಯುಲೆನ್ಸ್‌ನಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸಿದ್ದಾರೆ.

ತೀವ್ರ ಹೃದಯನೋವು ಕಾಣಿಸಿಕೊಂಡಿದ್ದ ಪಡ್ಡಂದಡ್ಕ ಕಟ್ಟೆ ಬಳಿಯ ನಿವಾಸಿ ಹರೀಶ್ ಕಟ್ಟೆ ಅವರು ನಮನ ಕ್ಲಿನಿಕ್‌ಗೆ ಆಗಮಿಸಿ ಪ್ರಥಮ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ತುರ್ತಾಗಿ ಮಂಗಳೂರಿಗೆ ತಲುಸಿಲಾಗಿತ್ತು. ಸದ್ಯ ಹರೀಶ್ ಅವರು ಚೇತರಿಸಿಕೊಂಡಿರುವುದಾಗಿ ಮಾಹಿತಿ ಬಂದಿದ್ದು, ಪ್ರಸಾದ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಪಚ್ಚು ಯಾನೆ ಪ್ರಸಾದ್ ಕುಲಾಲ್ ಅವರು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

Related posts

ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಹಾವೇರಿ ರಾಣಿ ಬೆನ್ನೂರಿನಲ್ಲಿ ಕಾರ್ಯಕ್ರಮ

Suddi Udaya

ಜಾನಪದ ಸ್ಫರ್ಧಾಕೂಟ: ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಸ್ವಚ್ಛತಾ ದಿನ: ಗಾಂಧಿ ಜಯಂತಿಗೆ ಅರಣ್ಯ ಇಲಾಖೆಯ ಅರ್ಥಪೂರ್ಣ ಗೌರವ

Suddi Udaya

ಪುತ್ತಿಲ: ಆಟೋ ಚಾಲಕ ದೀಕ್ಷಿತ್ ಬಿ. ಹೃದಯಾಘಾತದಿಂದ ನಿಧನ

Suddi Udaya

ಉರುವಾಲು ಶ್ರೀ ಮಹಮ್ಮಾಯಿ ದೇವಸ್ಥಾನ ಪ್ರತಿಷ್ಠೋತ್ಸವದ ಪೂರ್ವಭಾವಿ ಸಭೆ

Suddi Udaya

ಶಿಶಿಲ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ

Suddi Udaya
error: Content is protected !!