ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ಒತ್ತಾಯಿಸಿ ಬೆಳ್ತಂಗಡಿ ಬಿಜೆಪಿ ವತಿಯಿಂದ ಪ್ರತಿಭಟನೆಯು ಅ.18 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಎದುರು ನಡೆಯಿತು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಜಿಲ್ಲಾ ಉಪಾಧ್ಯಕ್ಷ ಹರೀಕೃಷ್ಣ ಬಂಟ್ವಾಳ,. ಜಯಾನಂದ ಗೌಡ ಬೆಳ್ತಂಗಡಿ, ಸುಧೀರ್ ಸುವರ್ಣ, ಉಮೇಶ್ ಕುಲಾಲ್, ರವಿ ಬರಮೇಲು ಉಜಿರೆ, ಶ್ರೀನಿವಾಸ ರಾವ್ ಧರ್ಮಸ್ಥಳ, ಕೊರಗಪ್ಪ ಗೌಡ ಚಾರ್ಮಾಡಿ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಗಣೇಶ್ ಗೌಡ ನಾವೂರು, ಸೀತಾರಾಮ ಬಿ.ಎಸ್, ದಿನೇಶ್ ಗೌಡ ದಿಡುಪೆ, ಶಶಿಧರ್ ಕಲ್ಮಂಜ, ಶರತ್ ಕುಮಾರ್ ಶೆಟ್ಟಿ, ಪ್ರಭಾಕರ ಪೊಸಂದೋಡಿ, ಕೇಶವ ಭಟ್ ಅತ್ತಾಜೆ , ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರು, ಪಕ್ಷದ ನಾಯಕರು, ಕಾಯ೯ಕತ೯ರು ಉಪಸ್ಥಿತರಿದ್ದರು.