24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಳಂತಿಲ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಎಸ್‌ಡಿಪಿಐ ಮನವಿ

ಬೆಳ್ತಂಗಡಿ : ಬೆಳ್ತಂಗಡಿ ಇಳಂತಿಲ ಗ್ರಾಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಾಗರೀಕರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಿ ಕೊಡುವಂತೆ ಇಳಂತಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಅ.20 ರಂದು ಮನವಿ ನೀಡಲಾಯಿತು.


ಇಳಂತಿಲ ಗ್ರಾಮದ ವಾರ್ಡ್‌ ಸಂಖ್ಯೆ ನಾಲ್ಕು ಕಡವಿನ ಬಾಗಿಲು ಹಾಗೂ ವಿನಾಯಿ ನಗರದ ನಾಗರೀಕರು ಹಲವಾರು ವರ್ಷಗಳಿಂದ ನೇತ್ರಾವತಿ ನದಿಯ ನೀರು ಯಾವುದೇ ಶುದ್ದೀಕರಣ ಘಟಕವಿಲ್ಲದೆ ಇನ್ನೂರಕ್ಕೂ ಅಧಿಕ ಮನೆಗಳಿಗೆ ಕಲುಷಿತ ನೀರು ನೇರ ಪೋರೈಕೆಯಾಗುತಿದ್ದು ಅಂಗನವಾಡಿ ಕೇಂದ್ರ ಸಣ್ಣ ಮಕ್ಕಳು ಹಾಗೂ ವಯಸ್ಕರು ಗರ್ಭಿಣಿ ಮಹಿಳೆಯರಿಗೆ ಆರೋಗ್ಯದಲ್ಲಿ ಅತಿಯಾದ ಸಮಸ್ಯೆ ಕಾಣುತಿದ್ದು ಅಪಾಯಕಾರಿ ನೀರನ್ನೇ ಉಪಯೋಗ ಮಾಡುತಿದ್ದಾರೆ ಇದರ ಬಗ್ಗೆ ವಾರ್ಡ್ ಸಭೆ, ಗ್ರಾಮ ಸಭೆ ಮತ್ತು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು.

ಅಧಿಕಾರಿಗಳು ಯಾವುದೆ ರೀತಿ ಕ್ರಮ ಕೈಗೊಳ್ಳದ ನಿರ್ಲಕ್ಷ ತೋರಿಸುತ್ತಿದ್ದು ಒಂದು ವಾರದೊಳಗಾಗಿ ನೀರಿನ ದೊಡ್ಡ ಮಟ್ಟದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶೀಘ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಗ್ರಾಮಸ್ಥರಿಗೆ ಪರಿಹಾರ ದೊರಕಿಸಬೇಕಾಗಿ ಮನವಿ ಮಾಡಲಾಯಿತು.


ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕಡವಿನ ಬಾಗಿಲು ಬೂತ್ ಸಮಿತಿ ಅಧ್ಯಕ್ಷರಾದ ಅಝೀಝ್, ಕಾರ್ಯದರ್ಶಿ ಅನ್ವರ್, ಕಣಿಯೂರು ಬ್ಲಾಕ್ ಸಮಿತಿ ಉಪಾಧ್ಯಕ್ಷರಾದ ರಝಕ್ ಕುದ್ರಡ್ಕ , ಸದಸ್ಯರಾದ ಫರ್ಹಾನ್, ಸ್ವಾಲಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Suddi Udaya

ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕ ಪೊಲೀಸ್ ವಶ: ಚಿಕ್ಕಮಗಳೂರು ದೊನಿಗದ್ದೆ ನಿವಾಸಿ ಸಂತೋಷ್ ಬಂಧನ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya

ನೆರಿಯ: ಅಣಿಯೂರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಕಾಟಾಜೆ ರಸ್ತೆಗೆ ನೀರು ಪ್ರವೇಶಿಸಿ ಮುಳುಗಿದ ಕಾರು

Suddi Udaya

ಕಳಿಯ ಬದಿನಡೆ ದೈವಗಳಿಗೆ ವಾರ್ಷಿಕ ನೇಮೋತ್ಸವ

Suddi Udaya

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya
error: Content is protected !!