23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ನಡೆದ ಕ್ರೈಸ್ತ ಪತ್ರಕರ್ತರಿಗೆ ಸಹಮಿಲನ ಮತ್ತು ಪತ್ರಿಕೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬೆಳ್ತಂಗಡಿ ವಾರ ಪತ್ರಿಕೆಯ ವರದಿಗಾರ ಹೆರಾಲ್ಡ್ ಪಿಂಟೊ ಸನ್ಮಾನ ಕಾರ್ಯಕ್ರಮವು ಜೆಪ್ಪು ಸಂತ ಅಂತೋನಿ ಆಶ್ರಮದ ಸಂಭ್ರಮ್ ಸಭಾಂಗಣದಲ್ಲಿ ಅ.22ರಂದು ನಡೆಯಿತು.

ಬೆಳ್ತಂಗಡಿ ವಾರ ಪತ್ರಿಕೆಯ ವರದಿಗಾರ ಹೆರಾಲ್ಡ್ ಪಿಂಟೊ ಕಳೆದ 24ವರ್ಷ ಸಲ್ಲಿಸಿದ ವಿಶಿಷ್ಟ ಸೇವೆಗೆ, ಬೆಳ್ತಂಗಡಿ ತಾಲೂಕಿನ ಎಲ್ಲಾ ಚರ್ಚ್ ಗಳ ವರದಿ, ವಿವಿಧ ಕಾರ್ಯಕ್ರಮಗಳ ವಿಶೇಷ ಲೇಖನದೊಂದಿಗೆ ಪುರವಣಿಗಳನ್ನು ಆಯೋಜಿಸಿ ಪತ್ರಿಕೆಯಲ್ಲಿ ಪ್ರಕಟ ಗೊಂಡಿದ್ದು, ತಾಲೂಕಿನ ವಿವಿಧ ದೇವಸ್ಥಾನಗಳ ಜಾತ್ರೆ, ಬ್ರಹ್ಮಕಲಶಕ್ಕೂ ವಿಶೇಷ ಲೇಖನ ಪುರವಣಿ ಸಂಯೋಜನೆಗೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧನೆಗಳನ್ನು ಗುರುತಿಸಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವ. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭ ಅವರ ಪತ್ನಿ ಜ್ಯೋತಿ ಪಿಂಟೊ, ಪುತ್ರಿ ಹೇಝಲ್ ಜಿಶಾ ಪಿಂಟೊ, ಉಜಿರೆಯ ಉದ್ಯಮಿ ಪ್ರಗತಿಪರ ಕೃಷಿಕ ಅರುಣ್ ರೆಬೆಲ್ಲೊ, ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪ್ರಕಾಶ್ ಡಿಸೋಜಾ, ವೆಲಂಕಣಿ ಕೇಟರಿಂಗ್ ಮಾಲಕ ಲ್ಯಾನ್ಸಿ ಮೋನಿಸ್, ಉಜಿರೆ ಎಸ್ ಎ ಆಯಿಲ್ ಮಿಲ್ ಮಾಲಕ ಅರುಣ್ ಸಂದೇಶ್ ಡಿಸೋಜಾ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಜಮೀಯ್ಯತುಲ್ ಫಲಾಹ್ ಘಟಕದ ಪದಗ್ರಹಣ ಸಮಾರಂಭ

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದಿಂದ ಮನೆ ದುರಸ್ತಿ ಕಾರ್ಯ

Suddi Udaya

ಕಳೆಂಜ: ನಡುಜಾರ್ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯ ಬದಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಯುವಕರ ತಂಡ

Suddi Udaya

ಗುರುವಾಯನಕೆರೆ ಸನ್ಯಾಸಿಕಟ್ಟೆ ಬಳಿ ಬೈಕ್ ಮತ್ತು ಟಿಪ್ಪರ್ ಡಿಕ್ಕಿ, ಬೈಕ್ ಸವಾರ ಸಾವು, ಇನ್ನೋರ್ವ ಗಂಭೀರ

Suddi Udaya
error: Content is protected !!