
ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಮಧ್ವ ಯಕ್ಷಕೂಟದ ವತಿಯಿ.ದ ಯಕ್ಷಾಭಿಮಾನಿಗಳು ಮಾಲಾಡಿ, ಸೋಣಂದೂರು ಇದರ ಸಹಕಾರದಲ್ಲಿ ನವರಾತ್ರಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಕೊಲ್ಪೆದಬಯಿಲ್ ಎಸ್‌ಕೆಎಸ್ ಸಭಾಂಗಣದಲ್ಲಿ ನಡೆಯಿತು.
ಪಾರೆಂಕಿ ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಕಾರ್ಯಾಧ್ಯಕ್ಷ ಡಾ. ಸುಬ್ರಹ್ಮಣ್ಯ ಬಲ್ಲಾಳ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿ, ಪುರಾಣ ಜ್ಞಾನ ತಿಳಿಯುತ್ತದೆ. ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಜಗತ್ತಿನೆಲ್ಲೆಡೆ ಪಸರಿಸಿದ್ದು, ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಶ್ರೀ ಕ್ಷೇತ್ರ ಪಾರೆಂಕಿಯ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮೂಡಾಯೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ತಾಳಮದ್ದಳೆ ನಡೆಸುವ ಯಕ್ಷಕೂಟದ ಭಾಸ್ಕರ ಶೆಟ್ಟಿ ಅವರ ಶ್ರಮ ಅಭಿನಂದಾರ್ಹ, ಯುವ ಜನತೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರಗತಿಪರ ಕೃಷಿಕ ಮೂಡಾಯೂರು ಸಂಜೀವ ಶೆಟ್ಟಿ, ನಿವೃತ್ತ ಸೈನಿಕ ಕಾಂತಪ್ಪ ಗೌಡ ಹಟತ್ತೋಡಿ, ಮಾಲಾಡಿ ವೇಣೂರು ಗ್ರಾಮ ಆಡಳಿತಾಽಕಾರಿ ಉಮೇಶ್, ಗತಿಪರ ಕೃಷಿಕ ಚಂದ್ರಶೇಖರ ಅಜಿಲ ಸೋಣಂದೂರು ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಜನಾರ್ದನ ಶೆಟ್ಟಿ ವಂದಿಸಿದರು. ರವಿಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಚೂಡಾಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರು ರವಿಚಂದ್ರ ಕನ್ನಡಿಕಟ್ಟೆ ಮತ್ತು ವಿಶ್ವಾಸ್ ಭಟ್, ಮದ್ದಳೆಯಲ್ಲಿ ಗಣೇಶ್ ಬೆಳಾಲು ಮತ್ತು ನವೀನ್ ಚಂದ್ರ ಮೊರ್ಗನಾಡು, ಮೊದಲನೇ ಹನುಮಂತನಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ತೃಣಬಿಂದು, ಸರಮೆ ಚಂದ್ರಶೇಖರ ಅಜಿಲ ಸೋಣಂದೂರು, ಎರಡನೇ ಹನುಮಂತನಾಗಿ ಶ್ರೀಮತಿ ಸಾಯಿಸುಮ ಎಂ. ನಾವಡ ಕಾರಿಂಜ,ರಾವಣ ಡಿ. ಪಾತಿಲ ತಿಮ್ಮಪ್ಪ ಶೆಟ್ಟಿ, ಸೀತೆಯಾಗಿ ಶ್ರೀಮತಿ ಜ್ಯೋತಿ ಶೈಲೇಶ್ ಅತ್ಯುತ್ತಮವಾಗಿ ಪಾತ್ರ ನಿವ೯ಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.