23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಗೆ ರೂ. 4.25 ಲಕ್ಷ ವಂಚನೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಆನ್ನೈನ್ ಜಾಬ್ ಆಫರ್ ನೀಡಿ ಹಣ ಪಡೆದು ವಂಚಿಸಿದ ಬಗ್ಗೆ ಧರ್ಮಸ್ಥಳ ಕಾಯರ್ತ್ತಡ್ಕ ನಿವಾಸಿ ಉಷಾ ಪಿ.ವಿ.(41ವ) ಎಂಬವರು ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.9ರಂದು ಅಪರಿಚಿತ ವ್ಯಕ್ತಿಯೊಬ್ಬ ಉಷಾ ಅವರಿಗೆ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದ.ಅದರಂತೆ ಉಷಾ ಅವರು ಕೆಲಸ ಪ್ರಾರಂಭಿಸಿದ್ದರು.ಆ ಬಳಿಕ ಅಪರಿಚಿತರು ಉಷಾ ಅವರಿಗೆ ವಿವಿಧ ಕಾರಣ ನೀಡಿ ಒಟ್ಟು ರೂ 4,25,934/ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 85/2023ರಂತೆ ಕಲಂ 419, 420 ಐಪಿಸಿ 66(ಸಿ) 66(ಡಿ) ಐ ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Related posts

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya

ಲಾಯಿಲ: ಸ್ವ ಉದ್ಯೋಗ ಆಧಾರಿತ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಚಾಲ್ತಿಯಲ್ಲಿ ಇಲ್ಲದ ಸಂಸ್ಥೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಇಬ್ಬರು ಯುವಕರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ

Suddi Udaya

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

Suddi Udaya
error: Content is protected !!