24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿ-2 : ನಾರ್ಯ ಎಂಬಲ್ಲಿ ಚಿರತೆ ಪತ್ತೆ

ಬೆಳ್ತಂಗಡಿ: ಉಜಿರೆಯ ಸಮೀಪದ ಕನ್ಯಾಡಿ-2 ಗ್ರಾಮದ ನಾರ್ಯ ಮೂರು ಮಾರ್ಗ ಎಂಬಲ್ಲಿ ಅ.25 ರಂದು ರಾತ್ರಿ ಚಿರತೆ ಕಂಡು ಬಂದಿರುವ ಕುರಿತು ತಿಳಿದು ಬಂದಿದೆ.

ರಾತ್ರಿ ಸಮಯ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಮೀಪದ ಪಾಣೇಲಿನ ವ್ಯಕ್ತಿಗೆ ಚಿರತೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದ್ದು, ಚಿರತೆಯ ಚಿತ್ರ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾರ್ಯ ಪರಿಸರದಲ್ಲಿ ಹಲವು ಮನೆಗಳು ಇದ್ದು ಇಲ್ಲಿನ ಮಂದಿ ಚಿರತೆ ಓಡಾಟದಿಂದ ಭಯ ಭೀತರಾಗಿದ್ದಾರೆ. ಈ ಭಾಗದಲ್ಲಿ ಧರ್ಮಸ್ಥಳ ಮೀಸಲು ಅರಣ್ಯ ಹಾಗೂ ಬೆಳಾಲು ವ್ಯಾಪ್ತಿಯ ದಡಂತಮಲೆ ಅರಣ್ಯ ಪ್ರದೇಶ ಇದ್ದು ಸಾವಿರ ಎಕರೆಗೂ ಹೆಚ್ಚಿನ ಅರಣ್ಯವಿದೆ. ಆಗಾಗ ಚಿರತೆ ಓಡಾಟ ಇರುವ ಸಾಧ್ಯತೆಯೂ ಇದೆ, ಬುಧವಾರ ರಾತ್ರಿಯ ವಿಚಾರ ಖಚಿತಗೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related posts

ಉಜಿರೆ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಉದ್ಘಾಟನೆ

Suddi Udaya

ಬೆಳ್ತಂಗಡಿ ಪ.ಪಂ. ಆಡಳಿತಾಧಿಕಾರಿಯಾಗಿ ತಹಶೀಲ್ದಾರ ಟಿ. ಸುರೇಶ್‌ ಕುಮಾರ್ ಅಧಿಕಾರ ಸ್ವೀಕಾರ

Suddi Udaya

ಜನಮಂಗಳ ಕಾರ್ಯಕ್ರಮದಡಿ ನೆರಿಯದ ಶಾಂತಪ್ಪ ರವರಿಗೆ ಊರುಗೋಲು ವಿತರಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಹಾಗೂ ದೂರ ದೃಷ್ಟಿ ಯೋಜನೆಯ ಗ್ರಾಮ ಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya

ಮಲೆಕುಡಿಯರ ಸಂಘ ನಿಡ್ಲೆ ವಲಯ ಸಮಿತಿಯಿಂದ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!